ಮಡಿಕೇರಿ ಸೆ.4 : ಕರಿಕೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಗೆ ಐದು ವರ್ಷಗಳ ಅವಧಿಗೆ ಸೆ.9 ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ಬೆಂಬಲಿತ 12 ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ, ಮಾಜಿ ಗ್ರಾ.ಪಂ ಅಧ್ಯಕ್ಷ ಹೊಸಮನೆ ಬಿ.ಚಂಗಪ್ಪ, ಜಿ.ಪಂ ಮಾಜಿ ಸದಸ್ಯೆ ಕವಿತಾ ಪ್ರಭಾಕರ್, ಗ್ರಾ.ಪಂ ಸದಸ್ಯರಾ ಕೆ.ಎ.ನಾರಾಯಣ, ಪಿ.ಟಿ.ಇಸಾಕ್, ಬೂತ್ ಅಧ್ಯಕ್ಷ ಪಾಂಡಿ, ನಂಜುಂಡ, ನಾರಾಯಣ ಹಾಜರಿದ್ದರು.








