ಮಡಿಕೇರಿ ಸೆ.05 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಇದರ ಅಧೀನ ಸಂಸ್ಥೆಯಾದ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್, ಮಡಿಕೇರಿ ಡಿಸಿಎಂ ಡಿಪ್ಲೊಮಾ ಪರೀಕ್ಷೆಯಲ್ಲಿ ರಾಜ್ಯಕ್ಕೆ 1 ನೇ ರ‍್ಯಾಂಕ್ , 3 ನೇ ರ‍್ಯಾಂಕ್ ಹಾಗೂ 6 ನೇ ರ‍್ಯಾಂಕ್ ಗಳನ್ನು ಮತ್ತು 5 ಡಿಸ್ಟಿಂಕ್ಷನ್‍ಗಳನ್ನು ಗಳಿಸಿದ್ದು, ಶೇ.100 ರಷ್ಟು ದಾಖಲೆ ಫಲಿತಾಂಶ ಬಂದಿದೆ.
ವಿ.ಭೂಮಿಕ 1ನೇ ರ‍್ಯಾಂಕ್ , ಬಿ.ಎ.ದಮಯಂತಿ 3ನೇ ರ‍್ಯಾಂಕ್ , ಬಿ.ಪಿ.ನಿತಿನ್ ನಂಜಪ್ಪ 6ನೇ ರ‍್ಯಾಂಕ್ ಪಡೆದಿದ್ದಾರೆ ಎಂದು ಕೆಐಸಿಎಂ ಪ್ರಾಂಶುಪಾಲರಾದ ಡಾ.ಆರ್.ಎಸ್.ರೇಣುಕಾ ತಿಳಿಸಿದ್ದಾರೆ.








