ಸೋಮವಾರಪೇಟೆ, ಸೆ.6: ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ಬೋಧಕೇತರ ನೌಕರರ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ಡಾ.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬೆಳ್ಳಿಯಪ್ಪ ಮಾತನಾಡಿ, ಭಾರತದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಗೌರವಾರ್ಥವಾಗಿ ಅವರ ಜನ್ಮದಿನವಾದ ಸೆ.5 ರಂದು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಸಮಾಜದಲ್ಲಿ ಶಿಕ್ಷಕರಿಗೆ ವಿಶೇಷ ಸ್ಥಾನವಿದೆ. ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವವನು ಗುರು. ಮಾನವ ಜೀವನದಲ್ಲಿ ಶಿಕ್ಷಕನ ಸ್ಥಾನವು ದೇವರು ಮತ್ತು ಪೋಷಕರಿಗಿಂತ ಮೇಲಿದೆ ಎಂದು ಬಣ್ಣಿಸಿದರು.
ಶಿಕ್ಷಣ ಸಂಯೋಜಕ ಕೆ.ಬಿ.ರಾಧಾಕೃಷ್ಣ, ಕಛೇರಿಯ ಪತ್ರಾಂಕಿತ ಅಧಿಕಾರಿ ಎಂ.ಆರ್.ಕಿರಣ್, ಅಧೀಕ್ಷಕ ಸಿ.ಪಿ.ದಾಮೋದರ್, ಸರ್ಕಾರಿ ನೌಕರರ ಸಂಘದ ಖಜಾಂಚಿ ವಿ.ಜಿ.ದಿನೇಶ್, ತಾಲ್ಲೂಕು ಬೋಧಕೇತರರ ನೌಕರರ ಸಂಘದ ಅಧ್ಯಕ್ಷ ಹೆಚ್.ಆರ್.ಸುರೇಶ್, ಉಪಾಧ್ಯಕ್ಷ ಹೆಚ್.ಟಿ.ರಾಜೇಶ್ , ನಿರ್ದೇಶಕ ಮೋಹನ್ ದಾಸ್, ಕಛೇರಿ ಸಿಬ್ಬಂದಿಗಳಾದ ಟಿ.ಬಿ.ಚಿದಾನಂದ, ಶೇಷಾದ್ರಿ ಎಲ್. ಸ್ವಾಮಿ, ಪಿ.ಎಸ್. ಭುವನೇಶ್ ಇತರರು ಹಾಜರಿದ್ದರು.








