ಶ್ರೀ ಕೃಷ್ಣ ಜನ್ಮಾಷ್ಟಮಿಯ ಅನಂತ ಶುಭಾಶಯಗಳು…..
::: ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟವಾದ ಮಾಹಿತಿ :::
1) ಕೃಷ್ಣ ಹುಟ್ಟಿದ್ದು 5253 ವರ್ಷಗಳ ಹಿಂದೆ.
2)ಜನ್ಮ ದಿನಾಂಕ ಜುಲೈ 19 ಕ್ರಿ.ಪೂ 3228
3) ತಿಂಗಳು : ಶ್ರಾವಣ
4) ದಿನ : ಅಷ್ಟಮಿ
5) ನಕ್ಷತ್ರ : ರೋಹಿಣಿ
6) ದಿನ : ಬುಧವಾರ
7) ಸಮಯ : 00:00 A.M.
8) ಶ್ರೀ ಕೃಷ್ಣ 126 ವರ್ಷ 8 ತಿಂಗಳು 7 ದಿನಗಳ ಕಾಲ ಬದುಕಿದ್ದ.
9) ಮರಣ ದಿನ 18 ಫೆಬ್ರವರಿ ಕ್ರಿಪೂ 3102
10) ಕೃಷ್ಣ 89 ವರ್ಷದವನಿದ್ದಾಗ ಕುರುಕ್ಷೇತ್ರ ಯುದ್ಧ ನಡೆಯಿತು.
11) ಕುರುಕ್ಷೇತ್ರ ಯುದ್ಧ ನಡೆದು 36 ವರ್ಷಗಳ ಬಳಿಕ ಕೃಷ್ಣನ ಮರಣವಾಯಿತು.
12) ಕುರುಕ್ಷೇತ್ರ ಯುದ್ಧವು ಮೃಗಾಶಿರ ಶುಕ್ಲ ಏಕಾದಶಿ ಕ್ರಿಪೂ 3139ರಲ್ಲಿ ಆರಂಭವಾಯಿತು( 8 ಡಿಸೆಂಬರ್). ಡಿಸೆಂಬರ್ 25 ಕ್ರಿಪೂ 3139ರಂದು ಯುದ್ಧ ಕೊನೆಗೊಡಿತು.
13) ಜಯದ್ರಥನ ಸಾವಿನ ಕಾರಣದಿಂದಾಗಿ ಕ್ರಿಪೂ 3139 ಡಿಸೆಂಬರ್ 21ರ ಸಂಜೆ 3ಗಂಟೆಯಿಂದ 5 ರವರೆಗೆ ಸೂರ್ಯಗ್ರಹಣವಾಯಿತು.
14) ಭೀಷ್ಮರು ಕ್ರಿಪೂ 3138ರ ಫೆಬ್ರವರಿ 2 ರಂದು ತೀರಿಕೊಂಡರು( ಉತ್ತರಾಯಣದ ಮೊದಲ ಏಕಾದಶಿ)
15) ಶ್ರೀ ಕೃಷ್ಣನನ್ನು
(a) ಮಥುರಾದಲ್ಲಿ ಕನ್ನಯ್ಯಾ
(b) ಓಡಿಸ್ಸಾದಲ್ಲಿ ಜಗನ್ನಾಥ
(c) ಮಹಾರಾಷ್ಟ್ರದಲ್ಲಿ ವಿಠಲ
(d) ರಾಜಸ್ತಾನದಲ್ಲಿ ಶ್ರೀನಾಥ
(e) ಗುಜರಾತಲ್ಲಿ ದ್ವಾರಕಾಧಿಶ್
(f) ಉಡುಪಿಯಲ್ಲಿ ಕೃಷ್ಣ
(g) ಕೇರಳದಲ್ಲಿ ಗುರುವಾಯುರಪ್ಪ ಮುಂತಾದ ಹೆಸರುಗಳಿಂದ ಪೂಜಿಸುತ್ತಾರೆ.
16) ಕೃಷ್ಣ ನ ತಂದೆ : ವಸುದೇವ
17) ತಾಯಿ : ದೇವಕಿ
18) ಸಾಕು ತಂದೆ :ನಂದ
19) ಸಾಕುತಾಯಿ : ಯಶೋಧೆ
20 ಹಿರಿಯಣ್ಣ: ಬಲರಾಮ
21) ತಂಗಿ : ಸುಭದ್ರೆ
22) ಜನ್ಮ ಸ್ಥಳ :ಮಥುರಾ
23) ಪತ್ನಿಯರು :ರುಕ್ಮಿಣೀ, ಸತ್ಯಭಾಮ…..
24) ಕೃಷ್ಣ ತನ್ನ ಜೀವಿತಾವಧಿಯಲ್ಲಿ 4 ಜನರನ್ನು ಮಾತ್ರ ಕೊಂದಿದ್ದ.
(i) ಚನೋರ,
(ii) ಕಂಸ,
(iii) ಶಿಶುಪಾಲ,
(iv)ದಂಟವಕ್ರ.
25) ಇವನ ತಾಯಿ ಉಗ್ರ ಕುಲದವಳಾದರೆ, ತಂದೆ ಯಾದವ ಕುಲದನಾಗಿದ್ದ.
26) ಕಪ್ಪಾಗಿ ಹುಟ್ಟಿದ್ದ ಕೃಷ್ಣನನ್ನು ಅವನ ಗೋಕುಲ ಹಳ್ಳಿಯವರು ಕನ್ನಾ ಎಂದು ಕರೆಯುತ್ತಿದ್ದರು.
27) ಕಾಡು ಮೃಗಗಳ ಹಾವಳಿಯಿಂದ ತನ್ನ 9ನೇ ವರ್ಷದಲ್ಲಿ ಕೃಷ್ಣ ಗೋಕುಲದಿಂದ ವೃಂದಾವನಕ್ಕೆ ಬಂದ.
28) ವೃಂದಾವನದಲ್ಲಿ ತನ್ನ 10ವರ್ಷ 8 ತಿಂಗಳವರೆಗೆ ಕಳೆದಿದ್ದ ಕೃಷ್ಣ ತನ್ನ ತನ್ನ 10ನೇ ವರ್ಷ ಪ್ರಾಯದಲ್ಲಿ ತನ್ನ ಮಾವನಾದ ಕಂಸನನ್ನು ಮಥುರಾದಲ್ಲಿ ಕೊಂದಿದ್ದ. ಮುಂದಿನ ದಿನದಲ್ಲಿ ಮತ್ತು ತಂದೆ ತಾಯಿಯನ್ನು ಬಿಟ್ಟು ಮಥುರಾಗೆ ಬಂದಿದ್ದ.
29) ಅಲ್ಲಿಂದ ಆತ ಮತ್ತೆ ವೃಂದಾವನಕ್ಕೆ ಯಾವತ್ತಿಗೂ ಹಿಂತಿರುಗಲಿಲ್ಲ.
30) ಮುಂದಿನ ದಿನದಲ್ಲಿ ಸಿಂಧೂ ರಾಜ ಕಲಯಾವನನ ಬೆದರಿಕೆಗೆ ಈತ ಮಥುರಾವನ್ನು ಬಿಟ್ಟು ದ್ವಾರಕೆಗೆ ಬಂದ.
31)ವೈನಾತೆಯ ಎಂಬ ಗಿರಿಜನರ(ಈಗಿನ ಗೋವಾ) ಸಹಾಯದಿಂದ ಈತ ಜಾರಾಸಂಧಾನನ್ನು ಸೋಲಿಸಿದ್ದ.
32) ಅಳಿದು ಹೋಗಿದ್ದ ದ್ವಾರಕಾ ನಗರವನ್ನು ಶ್ರೀಕೃಷ್ಣ ಮತ್ತೆ ಕಟ್ಟಿದ.
33) ಅಲ್ಲಿಂದ ಸಾಂದೀಪನಿ ಆಶ್ರಮಕ್ಕೆ ಬಂದ ಈತ ತನ್ನ 18ನೇ ವರ್ಷದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾನೆ.
34)ವಿದ್ಯಾಭ್ಯಾಸದ ಬಳಿಕ ಪಾಂಡವರ ದುರಂತದ ಬಗ್ಗೆ ಈತನಿಗೆ ತಿಳಿಯುತ್ತದೆ.ದ್ರೌಪದಿಯನ್ನು ಪಾಂಡವರಿಗೆ ಮದುವೆ ಮಾಡಿಸುತ್ತಾನೆ.
35) ಇಂದ್ರಪ್ರಸ್ಥ ರಾಜಧಾನಿಯನ್ನು ಕಟ್ಟಲು ಪಾಂಡವರಿಗೆ ಸಹಾಯ ಮಾಡುತ್ತಾನೆ.
36) ದ್ರೌಪದಿಯ ಮಾನವನ್ನು ಕಾಪಾಡುತ್ತಾನೆ.
37) ಪಾಂಡವರ ಗಡಿಪಾರಿನ ಸಮದಲ್ಲಿ ಪಾಂಡವರ ಪರವಾಗಿ ನಿಲ್ಲುತ್ತಾನೆ.
38) ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ಜಯಗಳಿಸುವಂತೆ ಮಾಡುತ್ತಾನೆ.
39) ಕುರುಕ್ಷೇತ್ರದಲ್ಲಿ ಅರ್ಜುನನ ಸಾರಥಿಯಾಗಿ ಕೆಲಸ ಮಾಡಿ, ಧರ್ಮದ ರಕ್ಷಣೆ ಮಾಡುತ್ತಾನೆ.
40) ಯುದ್ಧ ಭೂಮಿಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಭೋದಿಸಿದ ಮಹಾನ್ ಸಾಲುಗಳೇ “ಭಗವದ್ಗೀತೆ”
41) ಮುಂದಿನ ದಿನದಲ್ಲಿ ತಾನು ಕಟ್ಟಿದ ನಗರ ದ್ವಾರಕೆ ಮುಳುಗುದನ್ನು ಆತ ನೋಡಬೇಕಾಯಿತು.
42) ಜಾರಾ ಎನ್ನುವ ಬೇಟೆಗಾರನಿಂದ ಕೊನೆಗೆ ಶ್ರೀ ಕೃಷ್ಣನ ಹತ್ಯೆಯಾಯಿತು.
43) ಜೀವನದಲ್ಲಿ ಏನೂ ಜಾದೂ ಮಾಡದ ಸಾಮಾನ್ಯ ವ್ಯಕ್ತಿತ್ವ ಈತನದ್ದು. ಆತನ ಜೀವನ ಅತ್ಯಂತ ಕಠಿಣವಾಗಿತ್ತು ಮತ್ತು ಪ್ರತಿಕ್ಷಣವೂ ಹೊಸ ಸವಾಲುಗಳಿಂದ ಕೂಡಿತ್ತು. ಯಾವತ್ತಿಗೂ ತನ್ನ ನೋವನ್ನು ಹೊರಹಾಕದೆ ಸದಾ ತಾಳ್ಮೆಯಿಂದ ಮುಗಳ್ನಗುತ್ತಿದ್ದ ವ್ಯಕ್ತಿತ್ವ ಕೃಷ್ಣನದ್ದು.
44) ಸವಾಲುಗಳನ್ನು ತನ್ನ ಚತುರ ಬುದ್ಧಿವಂತಿಕೆಯಿಂದ ಕೃಷ್ಣ ಎದುರಿಸುತ್ತಾ ಮುಂದುವರೆಯುತ್ತಾನೆ.
45) ಭೂತಕಾಲ ಮತ್ತು ಭವಿಷ್ಯದ ಬಗ್ಗೆ ಕೃಷ್ಣನಿಗೆ ಚೆನ್ನಾಗಿ ತಿಳಿದಿತ್ತು. ಆತನಿಗೆ ಭವಿಷ್ಯವನ್ನುಅರಿಯುವ ವಿಶೇಷವಾದ ದೈವಿಶಕ್ತಿಯಿತ್ತು.
46) ಇನ್ನೊಬ್ಬರ ಮನಸ್ಸನ್ನು ಮುಖ ನೋಡಿ ಅರ್ಥಮಾಡಿಕೊಳ್ಳಬಲ್ಲ ವಿಶೇಷವಾದ ಮನೋಶಾಸ್ತ್ರಜ್ಞ ಕೂಡ ಈತನಾಗಿದ್ದ.
47) ಈತನ ಜೀವನ ಈತನ ಸಂದೇಶ ನಿಜಕ್ಕೂ ಎಲ್ಲರಿಗೂ ದಾರಿದೀಪ..