ಮಡಿಕೇರಿ ಸೆ.6 : ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಸತತ ಪರಿಶ್ರಮ ಪಡುತ್ತಿರುವ ಶಿಕ್ಷಕ ವೃಂದದ ನೆರವಿಗೆ ಸಕಾ೯ರದೊಂದಿಗೆ ಸಮಾಜ ಬಾಂಧವರು ಕೂಡ ಮುಂದಾಗುವ ಮೂಲಕ ಶಿಕ್ಷಕರಿಗೆ ಸಲ್ಲಬೇಕಾದ ಗೌರವವನ್ನು ಸಮಪಿ೯ಸಬೇಕಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಹೇಳಿದ್ದಾರೆ.
ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾಯ೯ಕ್ರಮದಲ್ಲಿ ರೋಟರಿಯ ಪ್ರತಿಷ್ಟಿತ ನೇಷನ್ ಬಿಲ್ಡರ್ಸ್ ಪ್ರಶಸ್ತಿಯನ್ನು ಸಾಧಕರಾದ ಐವರು ಶಿಕ್ಷಕರಿಗೆ ಪ್ರದಾನ ಮಾಡಿ ಮಂಥರ್ ಗೌಡ ಮಾತನಾಡಿದರು.
ಜೀವನವಿಡೀ ಮಕ್ಕಳ ಶ್ರೆಯೋಭಿವೃದ್ಧಿಗಾಗಿ ತಮ್ಮ ಎಲ್ಲಾ ಸುಖಸಂತೋಷಗಳನ್ನೂ ಶಿಕ್ಷಕರು ಬದಿಗಿಡುತ್ತಾರೆ. ವಿದ್ಯೆ ಕಲಿಸುವುದೇ ಶಿಕ್ಷಕರಿಗೆ ಮುಖ್ಯ ಉದ್ದೇಶದಂತಿರುತ್ತದೆ. ಇಂಥ ಪರಿಶ್ರಮದ ಕಾಯಕಜೀವಿಗಳ ಸೇವೆಯನ್ನು ಸಮಾಜ ಯಾವುದೇ ಕಾರಣಕ್ಕೂ ಮರೆಯಬಾರದು ಎಂದೂ ಶಾಸಕರು ಹೇಳಿದರು.
ವಿದ್ಯಾಥಿ೯ಗಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ಅನೇಕ ಸಾಧಕರನ್ನು ಸಮಾಜಕ್ಕೆ ಶಿಕ್ಷಕರು ಕೊಡುಗೆಯಾಗಿ ನೀಡುತ್ತಾರೆ. ಇಂಥ ಶಿಕ್ಷಕರನ್ನು ಗುರುತಿಸಿ ಅವರಿಗೆ ನೇಷನ್ ಬಿಲ್ಡಸ್೯ ಪ್ರಶಸ್ತಿಯನ್ನು ರೋಟರಿ ಸಂಸ್ಥೆ ನೀಡುವ ಮೂಲಕ ಮಹತ್ವದ ಯೋಜನೆಗೆ ಕಾರಣವಾಗಿದೆ ಎಂದೂ ಡಾ.ಮಂಥರ್ ಗೌಡ ಶ್ಲಾಘಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಮಾತನಾಡಿ, ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯು ಶಿಕ್ಷಣಕ್ಕೆ ಮಹತ್ವ ನೀಡುತ್ತಾ ಬಂದಿದ್ದು, ಪ್ರತೀ ವಷ೯ದ ಸೆಪ್ಟೆಂಬರ್ ತಿಂಗಳನ್ನು ಸಾಧಕ ಶಿಕ್ಷಕರನ್ನು ಗುರುತಿಸಿ ಅವರ ಸೇವೆಗೆ ಸನ್ಮಾನ ಮಾಡುವ ಕಾಯ೯ಕ್ಕೆ ಮುಡಿಪಾಗಿರಿಸಿದೆ. ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರು ಉತ್ತಮ ಸಾಧನೆ ಮಾಡಿದ ಶಿಕ್ಷಕ, ಶಿಕ್ಷಕಿಯರ ಬಗ್ಗೆ ಪರಿಶೀಲಿಸಿ ಪ್ರತೀ ವಷ೯ದಂತೆ ಈ ವಷ೯ವೂ ಅತ್ಯುತ್ತಮ ಸಾಧನೆ ಮಾಡಿದ ಶಿಕ್ಷಕ, ಶಿಕ್ಷಕರಿಗೆ ನೇಷನ್ ಬಿಲ್ಡರ್ ಪ್ರಶಸ್ತಿ ನೀಡುತ್ತಿದೆ ಎಂದರು.
ಕಾಯ೯ಕ್ರಮ ಸಂಚಾಲಕ, ಮಿಸ್ಟಿ ಹಿಲ್ಸ್ ನಿದೇ೯ಶಕ ಅನಿಲ್ ಎಚ್.ಟಿ. ಮಾತನಾಡಿ, ಕಳೆದ 8 ವಷ೯ಗಳಲ್ಲಿ ರೋಟರಿ ಮಿಸ್ಟಿ ಹಿಲ್ಸ್ 50 ಸಾಧಕ ಶಿಕ್ಷಕ, ಶಿಕ್ಷಕಿಯರಿಗೆ ನೇಷನ್ ಬಿಲ್ಡಸ್೯ ಪ್ರಶಸ್ತಿ ನೀಡಿದೆ, ಮಿಸ್ಟಿ ಹಿಲ್ಸ್ ನ 19 ವಷ೯ಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಶಾಸಕರು ಈ ಪ್ರಶಸ್ತಿಯನ್ನು ನೀಡಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಡಾ.ಮಂಥರ್ ಗೌಡ, ಬೆಂಗಳೂರಿನ ಕಿಮ್ಸ್ ಮತ್ತು ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾಯ೯ನಿವ೯ಹಿಸಿದ್ದು, ಶಿಕ್ಷಕರೂ ಆಗಿದ್ದ ಶಾಸಕರು ನೇಷನ್ ಬಿಲ್ಡಸ್೯ ಪ್ರಶಸ್ತಿಯನ್ನು ಶಿಕ್ಷಕರಿಗೆ ನೀಡುತ್ತಿರುವುದು ಗಮನಾಹ೯ ಎಂದು ಹೇಳಿದರು.
ರೋಟರಿ ಸಹಾಯಕ ಗವನ೯ರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ಮಿಸ್ಟಿ ಹಿಲ್ಸ್ ಕಾಯ೯ದಶಿ೯ ರತ್ನಾಕರ್ ರೈ ವೇದಿಕೆಯಲ್ಲಿದ್ದರು. ರೋಟರಿಯ ಪ್ರಮುಖರಾದ ಬಿ.ಜಿ.ಅನಂತಶಯನ, ಎ.ಕೆ.ವಿನೋದ್, ಎಂ.ಧನಂಜಯ, ಗಾನಾ ಪ್ರಶಾಂತ್ ಸನ್ಮಾನಿತರ ಪರಿಚಯ ಮಾಡಿದರು. ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾಪೂವಯ್ಯ ,ರೋಟರಿ ಜಿಲ್ಲೆಯ ಮಾಜಿ ಗವನ೯ರ್ ಡಾ.ರವಿಅಪ್ಪಾಜಿ, ಮಡಿಕೇರಿ ರೋಟರಿ ಅಧ್ಯಕ್ಷೆ ಗೀತಾ ಗಿರೀಶ್, ಮಡಿಕೇರಿ ರೋಟರಿ ವುಡ್ಸ್ ಅಧ್ಯಕ್ಷ ಕೆ.ವಸಂತ್ ಕುಮಾರ್, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಎ.ಕೆ.ನವೀನ್, ಮಡಿಕೇರಿ ಲಯನ್ಸ್ ಅಧ್ಯಕ್ಷ ಮಧುಕರ್ ಶೇಟ್ ಸೇರಿದಂತೆ ಅನೇಕರು ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು.
ಐವರಿಗೆ ಪ್ರಶಸ್ತಿ ಪ್ರದಾನ : ಕೊಡಗರಹಳ್ಳಿಯ ಶಾಂತಿನಿಕೇತನ ಶಾಲೆಯಲ್ಲಿ ಪ್ರಾಂಶುಪಾಲೆಯಾಗಿರುವ ಶಿಕ್ಷಣ ಕ್ಷೇತ್ರದಲ್ಲಿ 50 ವಷ೯ಗಳಿಗೂ ಮಿಕ್ಕಿ ಸಾಧನೆ ಮಾಡಿರುವ ಮೇರಿಫಾತಿಮಾ, ಮಡಿಕೇರಿಯ ನಿವೃತ್ತ ಶಿಕ್ಷಕಿ ಮಡಿಕೇರಿಯ ದೇವಕಿ, ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಮುಖ್ಯ ಶಿಕ್ಷಕ ಶ್ರೀಕೃಷ್ಣ ಭಟ್, ಮಡಿಕೇರಿಯ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲೆ ಕಲ್ಲುಮಾಡಂಡ ಸರಸ್ವತಿ, ಮಡಿಕೇರಿ ಸಂತಮೈಕಲರ ಶಾಲೆಯ ದೈಹಿಕ ಶಿಕ್ಷಕಿ ಸಗಯ ಮೇರಿ ಅವರಿಗೆ 2023 ನೇ ಸಾಲಿನ ನೇಷನ್ ಬಿಲ್ಡಸ್೯ ಪ್ರಶಸ್ತಿ ನೀಡಿ ಡಾ.ಮಂಥರ್ ಗೌಡ ಸನ್ಮಾನಿಸಿದರು.
ಸನ್ಮಾನಿತರು ಮಾತನಾಡಿ, ತಮ್ಮ ಶಿಕ್ಷಕ ಸೇವೆಯನ್ನು ಗುರುತಿಸಿ ನೇಷನ್ ಬಿಲ್ಡಸ್೯ ಪ್ರಶಸ್ತಿ ನೀಡಿದ ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಗೆ ಕೖತಜ್ಞತೆ ಸಲ್ಲಿಸಿದರು.