ಮಡಿಕೇರಿ ಸೆ.7 : ದಿನಾಂಕ 09-09-2023 ಶನಿವಾರದಂದು ಜೆಸಿಐ ಸಪ್ತಹ-2023ರ ಪ್ರಯುಕ್ತ ಸೆ.9 ರಂದು ಗೋಣಿಕೊಪ್ಪದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ.
ಗೋಣಿಕೊಪ್ಪಲುವಿನ ಶ್ರೀ ಉಮಾಮಹೇಶ್ವರಿ ದೇವಾಲಯದ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಹ್ನ 1 ಗಂಟೆಯವರೆಗೆ ನಡೆಯಲಿರುವ ಶಿಬಿರದ ಅಧ್ಯಕ್ಷತೆಯನ್ನು ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ನೀತ್ ಅಯ್ಯಪ್ಪ ವಹಿಸಲಿದ್ದಾರೆ.
ಕೊಡಗಿನಲ್ಲಿ ರಕ್ತದ ಕೊರತವಿದ್ದು ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಮಾಡಬೇಕಾಗಿ ಘಟಕದ ಪೂರ್ವಧ್ಯಕ್ಷ ಟಾಟು ಮೊಣ್ಣಪ್ಪ ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಪೂರ್ವಅಧ್ಯಕ್ಷರು :- ಟಾಟು ಮೊಣ್ಣಪ್ಪ ನವರು -94492 55081, ಕಾರ್ಯದರ್ಶಿ :- ಚೆಟ್ಟೋಳಿರ ಶರತ್ ಸೋಮಣ್ಣ – 9972538030, ನಿಕಟಪೂರ್ವ ಅಧ್ಯಕ್ಷರು :- ದಿನೇಶ್ ಎ ಪಿ -91489 78919.








