ಸುಂಟಿಕೊಪ್ಪ,ಸೆ.8 : ಸುಂಟಿಕೊಪ್ಪ ನಾಡಕಚೇರಿ ವತಿಯಿಂದ ನಾಕೂರು ಶಿರಂಗಾಲ ಗ್ರಾ.ಪಂ ವ್ಯಾಪ್ತಿಯ ಕಂದಾಯ ನಿಗಧಿ ಆಂದೋಲ ನಡೆಯಿತು.
ನಾಕೂರು ಶಿರಂಗಾಲ ಗ್ರಾ.ಪಂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್‍ಗೌರಯ್ಯ ಉದ್ಘಾಟಿಸಿ, ಕೃಷಿಭೂಮಿ ಸೇರಿದಂತೆ ಭೂಮಾಲೀಕರ ಹಕ್ಕುದಾರರು ದಾಖಲಾತಿಗಳನ್ನು ಹೊಂದಿಸಿಕೊಳ್ಳಲು ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸರಕಾರವು ಸಂಬಂಧಿಸಿದ ಇಲಾಖೆಯ ಮೂಲಕ ಪ್ರತಿ ಗ್ರಾಮಳಿಗೆ ಇಲಾಖೆಯ ಅಧಿಕಾರಿಗಳೇ ತೆರಳಿ ಗ್ರಾಮಸ್ಥರಿಂದ ಅರ್ಜಿಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕೃಷಿಕರು ಮತ್ತು ಭೂ ಸಮಸ್ಯೆಗಳನ್ನು ಎದುರಿಸುತ್ತಿರುವ ಮಂದಿ ಮೂಲ ದಾಖಲಾತಿಗಳನ್ನು ನೀಡುವ ಸಮಸ್ಯೆಗೆ ಪರಿಹಾರ ಒದಗಿಸಿಕೊಡಲಾಗುವುದು ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೆಕೆಂದರು.
ಸರ್ವೆ ವಿಭಾಗದ ಮುಖ್ಯಅಧಿಕಾರಿ ಮಹೇಶ್ ಸಭೆಯನ್ನುದ್ದೇಶಿಸಿ ಮತನಾಡಿದ ಅವರು ಗ್ರಾಮಸ್ಥರಿಗೆ ಸರ್ವೆ ಇಲಾಖೆಯ ವತಿಯಿಂದ ಕೃಷಿ ಹಾಗೂ ಭೂಮಾಲೀಕರು ಹಕ್ಕುದಾರರಿಗೆ ಆಂದೋಲನದ ಸದುಉದ್ದೇಶವನ್ನು ತಿಳಿಸಿದರು.
ಸುಂಟಿಕೊಪ್ಪ ಉಪ ತಹಶೀಲ್ದಾರ್ ಶಿವಪ್ಪ, ಸರ್ವೆಯರ್‍ಗಳಾದ ಶ್ರೀನಿವಾಸ್, ಸಿದ್ದರಾಜು, ಸಹಾಯಕಗುರು, ಕಂದಾಯ ಪರಿವೀಕ್ಷಕರಾದ ಪ್ರಶಾಂತ್, ಗ್ರಾಮ ಆಡಳಿತಾಧಿಕಾರಿ ಜಯಂತ್, ನಸೀಮ, ಗ್ರಾಮ ಸಹಾಯಕ ಶಿವಪ್ಪ ಇತರರು ಹಾಜರಿದ್ದರು.