ಸುಂಟಿಕೊಪ್ಪ ಸೆ.8 : ಅನಾರೋಗ್ಯದಿಂದ ಬಳಲುತ್ತಿರುವ ಯುವತಿಯ ಹೆಚ್ಚಿನ ಚಿಕಿತ್ಸೆಗಾಗಿ ನಾಕೂರು ಶಿರಂಗಾಲ ಫ್ರೆಂಡ್ಸ್ ಯೂತ್ ಕ್ಲಬ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.
ಯುವತಿಯ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳುವ ಅಗತ್ಯ ಇರುವುದರಿಂದ ಫ್ರೆಂಡ್ಸ್ ಯೂತ್ ಕ್ಲಬ್ ಗ್ರಾಮಸ್ಥರಿಂದ ಸಂಗ್ರಹಿಸಿಲಾದ ರೂ 30,350 ಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ನಾಕೂರು ಶಿರಂಗಾಲ ಫ್ರೆಂಡ್ಸ್ ಯೂತ್ ಕ್ಲಬ್ ಕಾರ್ಯದರ್ಶಿ ಶಂಕರನಾಯಣ, ಸದಸ್ಯ ದಯಾನಂದ, ಎಕೆಜಿ ಟಿಂಬರ್ ಬಾಯ್ಸ್ ಮಾಲೀಕ ಗಣೇಶ್, ಗ್ರಾಮಸ್ಥರಾದ ಹೆಚ್.ಪಿ.ಶಾಂತಪ್ಪ, ಪ್ರಕಾಶ ಮತ್ತಿತರರು ಹಾಜರಿದ್ದರು.