ಮಡಿಕೇರಿ ಸೆ.8 : ಪೊನ್ನಂಪೇಟೆಯ ಮದರ್ಸ್ ಆರ್ಮ್ ಮೊಂಟೆಸ್ಸರಿ ಪ್ಲೇ ಹೋಂ ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ರಾಧಾಕೃಷ್ಣನ ವೇಷಧಾರಿಗಳಾಗಿ ಪುಟಾಣಿಗಳು ಮಿಂಚಿದರು. ಶ್ಲೋಕ ಮತ್ತು ಹಾಡುಗಳನ್ನು ಹೇಳಿ ಗಮನ ಸೆಳೆದರು. ಬೆಣ್ಣೆ, ಚಕ್ಕುಲಿ, ರವೆ ಉಂಡೆ ಮುಂತಾದ ಖಾದ್ಯಗಳನ್ನು ಸವಿದು ಪೋಷಕರೊಂದಿಗೆ ಸಂಭ್ರಮಿಸಿದರು. ಪ್ಲೇ ಹೋಂ ನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಪುಟಾಣಿಗಳ ಪೋಷಕರು ಕೂಡ ಪಾಲ್ಗೊಂಡು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.










