ಮಡಿಕೇರಿ ಸೆ.8 : ವಿರಾಜಪೇಟೆಯ ಡಾ.ಬಿ.ಆರ್.ಅಂಬೇಡ್ಕರ್ ಭವನ ಯೋಜನಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಜೀವವಿಮಾ ನಿಗಮದ ನಿವೃತ್ತ ನೌಕರ ಹೆಚ್.ಆರ್.ಶಿವಪ್ಪ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹೆಚ್.ಎನ್.ಮಹದೇವ್, ಕಾರ್ಯದರ್ಶಿಯಾಗಿ ಪುರಸಭಾ ಸದಸ್ಯ ರಜನಿಕಾಂತ್, ಸಹ ಕಾರ್ಯದರ್ಶಿಯಾಗಿ ಶಿಕ್ಷಕರಾದ ಸತೀಶ್, ಖಜಾಂಚಿಯಾಗಿ ಮಾಜಿ ಸೈನಿಕ ಗೋಪಾಲ ರಾಜ್, ಗೌರವಾಧ್ಯಕ್ಷರಾಗಿ ಶಿಕ್ಷಣ ಇಲಾಖೆಯ ನಿವೃತ್ತ ನೌಕರ ಸಣ್ಣಯ್ಯ, ಸಲಹೆಗಾರರಾಗಿ ನಿವೃತ್ತ ಶಿಕ್ಷಕ ವೀರಭದ್ರಯ್ಯ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ನೇಮಕಗೊಂಡಿದ್ದಾರೆ.
ವಿರಾಜಪೇಟೆಯಲ್ಲಿ ಸಂಘದ ನಿಕಟ ಪೂರ್ವ ಅಧ್ಯಕ್ಷ ಎನ್.ವೀರಭದ್ರಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯೋಜನಾಭಿವೃದ್ಧಿ ಸಂಘವನ್ನು ಪುನರ್ ರಚಿಸಲಾಯಿತು. ಈ ಸಂದರ್ಭ ದಲಿತ ಮುಖಂಡ ಕೆ.ಪಳನಿ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.









