ಮಡಿಕೇರಿ ಸೆ.8 : ನಗರದ ಬ್ರಹ್ಮಕುಮಾರಿ ಲೈಟ್ಹೌಸ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ವಕೀಲರಾದ ನಿರಂಜನ್ ಜ್ಯೋತಿ ಬೆಳಗಿಸಿ, ಶುಭಹಾರೈಸಿದರು.
ಜಿಲ್ಲಾಸ್ಪತ್ರೆಯ ವೈದ್ಯಧಿಕಾರಿಗಳಾದ ಡಾ.ಸತೀಶ್ ಹಾಗೂ ಡಾ.ಶಿಲ್ಪ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಜಿಲ್ಲಾ ಸಂಚಾಲಕರಾದ ಬ್ರಹ್ಮಕುಮಾರಿ ರಾಜಯೋಗಿನಿ ಗಾಯತ್ರಿಜೀ ಆಶೀರ್ವಚನ ನೀಡಿದರು.
ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮಕ್ಕಳು ಕೃಷ್ಣ ಮತ್ತು ಗೋಪಿಕೆಯರ ವೇಷದಲ್ಲಿ ಕಂಗೊಳಿಸಿದರು. ಆಮಿಸಿದ ಎಲ್ಲರಿಗೂ ಪ್ರಸಾದ ವಿತರಿಸಲಾಯಿತು.