ಮಡಿಕೇರಿ ಸೆ.8 : ವಿಶ್ವಕರ್ಮ ಜಯಂತಿಯನ್ನು ಸೆ.17 ರಂದು ಆಚರಿಸುವ ಸಂಬಂಧ ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರ ಜೊತೆ ಚರ್ಚೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸಮಾಜದ ಮುಖಂಡ ಜೊತೆ ಚರ್ಚಿಸಿದ ಬಳಿಕ ಜಿ.ಪಂ.ಸಿಇಒ ಅವರ ಕಚೇರಿಯಲ್ಲಿ ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರ ಸಮ್ಮುಖದಲ್ಲಿ ಸಮಾಲೋಚನೆ ನಡೆಯಿತು.
ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರದಲ್ಲಿಯೇ ಆಯೋಜಿಸಬೇಕು. ತಾಲ್ಲೂಕು ಮಟ್ಟದ ಕಾರ್ಯಕ್ರಮವನ್ನು ತಾಲ್ಲೂಕು ಮಟ್ಟದಲ್ಲಿ ಮಾಡಬಹುದಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅವರ ಜೊತೆ ಚರ್ಚಿಸಿ ತಿಳಿಸಲಾಗುವುದು ಎಂದು ಜಿ.ಪಂ.ಸಿಇಒ ಹೇಳಿದರು.
ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಎಸ್.ಜೆ.ದೇವದಾಸ್, ಜಿಲ್ಲಾ ಕಾರ್ಯದರ್ಶಿ ಬಿ.ಬಿ.ನಾಗರಾಜು, ವಿಶ್ವಕರ್ಮ ಸಮಾಜದ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಎಸ್.ಬಿ.ಯಶವಂತ್, ಶಿಲ್ಪಿ ಮಂಜುನಾಥ ಆಚಾರ್ಯ, ಬಿ.ಕೆ.ಸುದರ್ಶನ, ಕೆ.ಕೆ.ರಮೇಶ್, ಎನ್.ಪಿ.ರಾಜು. ಜಗದೀಶ್ ಆಚಾರ್ಯ, ದಾಮೋದರ ಆಚಾರ್ಯ, ಸಂದ್ಯಾ ಅಶೋಕ್, ವೀಣಾ ಅಶೋಕ್, ಬಿ.ಸಿ.ಅಶೋಕ್ ಆಚಾರ್ಯ, ರವಿ ಆಚಾರ್ಯ, ಸಂದೇಶ್ ಆಚಾರ್ಯ, ಸುರೇಶ್ ಆಚಾರ್ಯ, ಶಾಂತಿ ದೇವದಾಸ್, ಶೋಭ ಯಶವಂತ್, ಪ್ರಕಾಶ್ ಆಚಾರ್ಯ ಇತರರು ಪಾಲ್ಗೊಂಡಿದ್ದರು.
Breaking News
- *ವಿರಾಜಪೇಟೆಯಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವಾರ್ಷಿಕ ಕ್ರೀಡಾಕೂಟ : ಯೋಧರ ಬಗ್ಗೆ ಗೌರವ ಇರಲಿ : ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ*
- *ಗುಂಡು ಎಸೆತ : ಕರ್ನಾಟಕವನ್ನು ಪ್ರತಿನಿಧಿಸಿದ ಕಾವೇರಿ ಶಾಲೆ ವಿದ್ಯಾರ್ಥಿನಿ ಪಿ.ಶಿಪ್ರಾ ಕಾಳಪ್ಪ*
- *ಅಮ್ಮತ್ತಿ- ಪಾಲಿಬೆಟ್ಟ ರಸ್ತೆ ಅವ್ಯವಸ್ಥೆ : ಆಟೋ ಚಾಲಕರಿಂದ ಪ್ರತಿಭಟನೆ*
- *ನಾಪೋಕ್ಲುವಿನಲ್ಲಿ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ : ಸರ್ವ ಸದಸ್ಯರು ಒಗ್ಗೂಡಿದರೆ ಮಾತ್ರ ಸಂಘದ ಬೆಳವಣಿಗೆ ಸಾಧ್ಯ : ನಾಣಯ್ಯ*
- *ವಿರಾಜಪೇಟೆಯಲ್ಲಿ ಸಂವಿಧಾನ ಜಾಗೃತಿ ಜಾಥಾ*
- *ಹೊಸಕೋಟೆ ಗ್ರಾಮದಲ್ಲಿ ಕಾಡಾನೆ ಹಿಂಡು ದಾಳಿ : ಬೆಳೆನಾಶ : ಸೂಕ್ತ ಕ್ರಮಕ್ಕೆ ಬೆಳೆಗಾರರ ಆಗ್ರಹ*
- *ಸೋಮವಾರಪೇಟೆ ಸಂತಜೋಸೆಫರ ಪದವಿ ಕಾಲೇಜಿನಲ್ಲಿ ಸಂವಿಧಾನ ಪೀಠಿಕೆ ವಾಚನ*
- *ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿಯಲ್ಲಿ ಸಂವಿಧಾನ ದಿನ ಆಚರಣೆ*
- *ತೋಳೂರುಶೆಟ್ಟಳ್ಳಿ : ಡಾ. ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಸಂವಿಧಾನ ದಿನಾಚರಣೆ*
- *ಸೋಮವಾರಪೇಟೆ ಗ್ಯಾರೆಂಟಿ ಯೋಜನೆಯ ಮಾಸಿಕ ಸಭೆ*