ಸುಂಟಿಕೊಪ್ಪ ಸೆ.9 : ಕ್ಯಾಥೋಲಿಕ್ ಕ್ರೈಸ್ತರ ಮಾತೆ ಮರಿಯಮ್ಮ ಜನ್ಮದಿನೋತ್ಸವದ ಅಂಗವಾಗಿ ದಿವ್ಯ ಅಡಂಬರ ಬಲಿಪೂಜೆಯನ್ನು ಧರ್ಮಗುರುಗಳು ನೇರವೇರಿಸಿದರು.
ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಶ್ರದ್ಧಾಭಕ್ತಿಯಿಂದ ಪ್ರಾರ್ಥನೆ ಹಾಗೂ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.
ಮಾತೆ ಮರಿಯಮ್ಮನವರ ಜನ್ಮದಿನದ ಬಲಿಪೂಜೆಯನ್ನು ಮೈಸೂರು ವಲಯ ಶೇಷ್ಠಗುರುಗಳಾದ ರೇ.ಮೆ.ಅಲ್ಪೆರ್ಡ್ ಜಾನ್ ಮೆಂಡೋನ್ಸಾ ಹಾಗೂ ಹಿರಿಯ ಗುರುಗಳಾದ ಡೆನ್ನಿಸ್ ಡಿಸೋಜ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಫಾದರ್ ಅರುಳ್ ಸೆಲ್ವಕುಮಾರ್ ದಿವ್ಯ ಬಲಿಪೂಜೆಯನ್ನು ಸಮರ್ಪಿಸಿದರು.
ನಂತರ ಮಾತೆ ಮರಿಯಮ್ಮನವರ ಮೂರ್ತಿಯನ್ನು ಮೆರವಣಿಗೆಯ ಮೂಲಕ ಸಂತ ಮೇರಿ ಶಾಲಾ ಆವರಣದಲ್ಲಿ ಇರಿಸಿ ಪುಷ್ಪನಮನ ಸಲ್ಲಿಸಲಾಯಿತು.
ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯವರ ಜನ್ಮ ಜಯಂತಿ ಮತ್ತು ತೆನೆಹಬ್ಬ (ಮೊಂತಿಪೆಸ್ತ್) ವಿಶ್ವದದ್ಯಾಂತ ಆಚರಿಸಲಾಗುತ್ತಿದ್ದು, ಅದಕ್ಕೆ ಪೂರ್ವಭಾವಿಯಾಗಿ ನಡೆಯುವ 9 ದಿನಗಳ ದಿವ್ಯ ಬಲಿಪೂಜೆ ಹಾಗೂ ನೊವೇನಾ ಪ್ರಾರ್ಥನೆ ಹಾಗೂ ದಿವ್ಯ ಬಲಿಪೂಜೆಯು ಆ.30 ರಿಂದ ವಿಶೇಷ ರೀತಿಯಲ್ಲಿ ಆಚರಿಸಲಾಯಿತು.
ನೊವೇನಾ ಪ್ರಾರ್ಥನೆ ಸಂದರ್ಭದಲ್ಲಿ ವಿಶೇಷವಾಗಿ ಮಾತೆ ಮರಿಯಮ್ಮನವರಿಗೆ ವಿವಿಧ ಬಗೆಯ ಸೀರೆಗಳನ್ನು ತೊಡಿಸಲಾಗುವುದು. ಚಿಕ್ಕಮಕ್ಕಳು, ಯವಕ, ಯುವತಿಯರು ಹಾಗೂ ಹಿರಿಯರು ಪ್ರತಿ ದಿನ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಗಾಯನ ಬಲಿಪೂಜೆಯಲ್ಲಿ ಪಾಲ್ಗೊಂಡು ನಂತರ ತಾವು ತಂದ ಹೂವುಗಳನ್ನು ಕ್ರಿಸ್ತರ ತಾಯಿ ನಮ್ಮೆಲ್ಲಾರ ಮಾತೆ ಮರಿಯಮ್ಮನವರಿಗೆ ಸಮರ್ಪಿಸಿದರು.
9 ದಿನಗಳ ನೊವೇನಾ ಪ್ರಾರ್ಥನೆ ಕಾರ್ಯಕ್ರಮಗಳೊಂದಿಗೆ ಹೊಸ ತೆನೆಗಳ ‘ಮೊಂತಿ ಪೆಸ್ತ್’ ಹಬ್ಬವನ್ನು ಎಲ್ಲಾ ದೇವಾಲಯಗಳಲ್ಲಿ ಸಾಮೂಹಿಕವಾಗಿ ಆಚರಿಸಿ ಪ್ರಾರ್ಥನೆ ಮಾಡಲಾಗುತ್ತದೆ. ಆ ನಂತರ ಮನೆ ಮನೆಗಳಲ್ಲಿ ಭಕ್ಷಭೋಜನಗಳೊಂದಿಗೆ ಆಚರಿಸುವುದು ಸಂಪ್ರದಾಯವಾಗಿದೆ.
ಮೊಂತಿ ಪೆಸ್ತ್ ಅಂಗವಾಗಿ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಫಾದರ್ ಅರುಳ್ ಸೆಲ್ವಕುಮಾರ್ ಹಾಗೂ ಮೈಸೂರು ವಲಯ ಶೇಷ್ಠಗುರುಗಳಾದ ರೇ.ಮೆ.ಅಲ್ಪೆರ್ಡ್ ಜಾನ್ ಮೆಂಡೋನ್ಸಾ ಹಾಗೂ ಹಿರಿಯ ಗುರುಗಳಾದ ಡೆನ್ನಿಸ್ ಡಿಸೋಜ ಸಂತ ಅಂತೋಣಿ ಬಲಿಪೂಜೆ ಪ್ರವಚನಗಳನ್ನು ನೀಡಿದರಲ್ಲದೆ, ಮೊಂತಿಪೆಸ್ತ್ ಅಂಗವಾಗಿ ನೂತನ ತೆನೆಗಳನ್ನು ಆರ್ಶಿವಚಿಸಿ ವಿತರಿಸಿದರು.
ಕ್ರೈಸ್ತ ಬಾಂದವರು ಮನೆ ಮನೆಗಳಿಂದ ಒಗೂಡಿಸಿ ತಂದಿದ ಬಗೆ ಬಗೆಯ ಪುಷ್ಪಗಳನ್ನು ಎಲ್ಲಾರೂ ಮಾತೆ ಮಯರಿಮ್ಮನವರಿಗೆ ಸಮರ್ಪಿಸುವ ಮೂಲಕ ಹಬ್ಬದ ಸಡಗರಕ್ಕೆ ಮುನ್ನುಡಿ ಇಟ್ಟರು.