ವಿರಾಜಪೇಟೆ ಸೆ.9 : ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ವಿರಾಜಪೇಟೆಯ ಗೋಜೂ ರ‍್ಯೂ ಕರಾಟೆ ತರಬೇತಿ ಶಾಲೆಯ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಕೊಯಂಬತ್ತೂರಿನ ಸೂಲೂರಿನಲ್ಲಿ ಆರ್.ವಿ.ಎಸ್ ಗ್ರೂಫ್ ಸಂಸ್ಥೆಗಳು ಮತ್ತು ಐ.ಎಂ.ಜಿ.ಕೆ.ಎ ಇಂಡಿಯ ವತಿಯಿಂದ ಆಯೋಜಿಸಲಾದ 16ನೇ ಈ.ಎಂ.ಜಿ.ಕೆ.ಎ ಏಷ್ಯನ್ ಒಪನ್ ಚಾಂಪಿಯನ್ಸ್ ಕರಾಟೆ ಡೂ ಚಾಂಪಿಯನ್-2023 ಸ್ಪರ್ಧೆಯ ಕತ್ತಾ, ಕುಮಿತೆ, ಟೀಂ ಕತ್ತಾ ವಿಭಾಗದಲ್ಲಿ ವಿರಾಜಪೇಟೆ ನಗರದ ಗೋಜೂ ರ‍್ಯೂ ಕರಾಟೆ ತರಬೇತಿ ಶಾಲೆಯ ಒಟ್ಟು 18 ಮಂದಿ ವಿದ್ಯಾರ್ಥಿಗಳು ಭಾಗವಹಿಸಿ 17 ಚಿನ್ನದ ಪದಕ, 11 ಬೆಳ್ಳಿ ಹಾಗೂ 12 ಕಂಚಿನ ಪದಕಗಳು ಸೇರಿದಂತೆ ಪ್ರಶಸ್ತಿಪತ್ರ ಪಡೆದುಕೊಂಡು ಜಿಲ್ಲೆಗೆ, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳಿಗೆ ಸನ್‍ಸಾಯಿ ಎಂ.ಬಿ.ಚಂದ್ರನ್ ತರಬೇತಿ ನೀಡಿದ್ದು, ವಿದ್ಯಾರ್ಥಿಗಳ ಸಾಧನೆಗೆ ಜಿಲ್ಲೆಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಪರ್ಧೆಯಲ್ಲಿ ಏಷೀಯ ಉಪ ಖಂಡಗಳಾದ ಭಾರತ, ಶ್ರೀಲಂಕ, ಖಾಜಕಿಸ್ಥಾನ್, ನೇಪಾಲ್ ದೇಶಗಳಿಂದ ಸುಮಾರು 1400 ಮಂದಿ ಕ್ರೀಡಾ ಪಟುಗಳು ಭಾಗವಹಿಸಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ








