ಮಡಿಕೇರಿ ಸೆ.10 : ಅರಪಟ್ಟುವಿನ ಪಾಂಡಂಡ ಐನ್ ಮನೆಯಲ್ಲಿ ಕೈಲ್ ಪೊಳ್ದ್ ಸಂಭ್ರಮದಿಂದ ನಡೆಯಿತು. ಕೊಡವ ಸಾಂಪ್ರದಾಯಿಕ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಮಕ್ಕಳಿಗೆ ಬಲೂನ್ ಹೊಡೆಯುವ ಸ್ಪರ್ಧೆ ಸೇರಿದಂತೆ ವೈವಿಧ್ಯಮಯ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಂಡಂಡ ಕುಟುಂಬದ ಪಟ್ಟೆದಾರ ಪಾಂಡಂಡ ಮೊಣ್ಣಪ್ಪ, ಅಧ್ಯಕ್ಷ ಪಾಂಡಂಡ ಉಮೇಶ್ ಚಂಗಪ್ಪ, ಕುಟುಂಬದ ಹಿರಿಯರಾದ ಪಾಂಡಂಡ ಕಿಟ್ಟು ಅಯ್ಯಣ್ಣ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪಾಂಡಂಡ ವಿನಿತಾ ಚಂಗಪ್ಪ ರವರು ನಿರೂಪಿಸಿದರು. ಪಾಂಡಂಡ ಕುಟುಂಬದ ಸದಸ್ಯರೆಲ್ಲರು ಉಪಸ್ಥಿತರಿದ್ದರು.










