ಮಡಿಕೇರಿ ಸೆ.10 : ಮೈಸೂರಿನ ಜಗನ್ ಮೋಹನ ಪ್ಯಾಲೇಸ್‌ನಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡ ದ್ವಿತೀಯ ಸ್ಥಾನ ಗಳಿಸಿದೆ.
ಡಿವೈನ್ ಡ್ಯಾನ್ಸ್ ಅಕಾಡೆಮಿ ಪುನೀತ್ ರಾಜಕುಮಾರ್ ಸ್ಮರಣಾರ್ಥ ನಡೆಸಿದ ಸ್ಪರ್ಧೆ ಹಾಗೂ ಮಂಜುಶ್ರೀ ಸ್ಟೆಪ್ಸ್ ನಡೆಸಿದ ಎರಡೂ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಕಿಂಗ್ಸ್ ಆಫ್ ಕೂರ್ಗ್ ತಂಡ ಸಬ್ ಜೂನಿಯರ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದೆ.
ನೃತ್ಯ ಸಂಸ್ಥೆಯ ತರಬೇತುದಾರರಾದ ಮಹೇಶ್ ಹಾಗೂ ಕಿರಣ್ ಅವರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಕನ್ನಿಕೆ, ಮೊಶಿಕಾ, ಯಶಿಕಾ, ಶ್ರೇಯ, ರಿಯಾಂಕ, ಒಸಿನ್, ಪ್ರಜ್ವಲ್, ಮುತ್ತಮ್ಮ, ಸೋನಾಕ್ಷಿ, ಶ್ರೀರಕ್ಷಾ, ಯಾದ್ವಿತಾ, ಕಿಶನ್, ದೀಪಿಕ್ಷಾ, ವಿಸ್ಮಯ, ಪ್ರೇಕ್ಷಿತಾ, ನಿರನ್ ಹಾಗೂ ಇಶಾಂತ್ ನೃತ್ಯ ಪ್ರದರ್ಶನ ಮಾಡಿದರು.











