ಗೋಣಿಕೊಪ್ಪ ಸೆ.10 : ಜೆಸಿಐ ಪೊನ್ನಂಪೇಟೆ ನಿಸರ್ಗ ಆಯೋಜನೆಯಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ಗ್ರಾ.ಪಂ. ಅಧ್ಯಕ್ಷೆ ಮನ್ನಕಮನೆ ಸೌಮ್ಯ ಬಾಲು ಚಾಲನೆ ನೀಡಿದರು.
ಶ್ರೀ ಉಮಾಮಹೇಶ್ವರಿ ದೇವಾಲಯದ ಸಭಾಂಗಣದಲ್ಲಿ ಜೆಸಿಐ ಸಪ್ತಾಹ 2023ರ ಪ್ರಯುಕ್ತ ರಕ್ತದಾನ ಶಿಭಿರ ಜೆಸಿಐ ಪೊನ್ನಂಪೇಟೆ ನಿಸರ್ಗ ಅಧ್ಯಕ್ಷ ನೀತ್ ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
ರಕ್ತದಾನ ಮಾಡುವುದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಮತ್ತೊಬ್ಬರ ಜೀವವನ್ನು ಉಳಿಸಲು ಕಾರಣವಾಗಬಹುದು. ಯುವ ಸಮುದಾಯ ರಕ್ತದಾನ ಮಾಡುವುದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಮತ್ತು ಯುವ ಸಮುದಾಯದಕ್ಕೆ ರಕ್ತದಾನ ಮಾಡುವುದರ ಪ್ರೇರಣಾತ್ಮಕವಾದ ಕಾರ್ಯಕ್ರಮಗಳನ್ನು ಸಂಘಟನೆಗಳು ಆಯೋಜಿಸಬೇಕೆಂದು ಗ್ರಾ.ಪಂ. ಅಧ್ಯಕ್ಷ ಸೌಮ್ಯ ಬಾಲು ಸಲಹೆ ನೀಡಿದರು.
ಗ್ರಾ.ಪಂ. ಸದಸ್ಯ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ ರಕ್ತದಾನ ಮಾಡುವುದರ ಶ್ರೇಷ್ಠತೆಯನ್ನು ಯುವ ಸಮುದಾಯ ಅರಿತುಕೊಳ್ಳುವುದರಲ್ಲಿ ಸೋತಿದೆ. ದುಶ್ಚಟಗಳಿಗೆ ಒಳಗಾಗುತ್ತಿರುವ ಯುವಕರು ರಕ್ತದಾನ ಮಾಡಲು ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ಮಕ್ಕಳಲ್ಲಿ ರಕ್ತದಾನದ ಶ್ರೇಷ್ಠತೆಯ ಬಗ್ಗೆ ತಿಳಿಸಿಕೊಡುವ ಅಗತ್ಯವಿದೆ. ಯಾವುದೇ ಹಿಂಜರಿಕೆಯಿಲ್ಲದೇ ಪ್ರತಿಯೊಬ್ಬರು ರಕ್ತದಾನ ಮಾಡುವುದರಿಂದ ರಕ್ತದ ಕೊರತೆಯನ್ನು ನೀಗಿಸಲು ಸಾಧ್ಯವಾಗಬಲ್ಲದು ಎಂದು ತಿಳಿಸಿದರು.
ಇಂದಿನ ಆಹಾರ ಪದ್ದತಿಯಿಂದ ಅನಾರೋಗ್ಯಕ್ಕೀಡಾಗುವುದು ಕಾಣಬಹುದಾಗಿದೆ. ಈ ಕಾರಣಗಳಿಂದ ರಕ್ತದಾನ ಮಾಡಲು ಬಹಳಷ್ಟು ಜನರಿಗೆ ಸಾಧ್ಯವಾಗುತ್ತಿಲ್ಲ. ದೇಹದಲ್ಲಿನ ಕೊಬ್ಬು, ಸಕ್ಕರೆ ಕಾಯಿಲೆ, ಬಿಪಿ, ಹೃದಯಾಘಾತಗಳನ್ನು ರಕ್ತದಾನ ಮಾಡುವುದರಿಂದ ತಡೆಗಟ್ಟಬಹುದು ಎಂದು ಹೇಳಿದ ಅವರು ಇದುವರೆಗೆ 58 ಬಾರಿ ರಕ್ತದಾನ ಮಾಡಿರುವುದಾಗಿ ಮಾಹಿತಿ ನೀಡಿದರು.
ಜೆಸಿಐ ಯೋಜನಾಧಿಕಾರಿ ಆಪಟೀರ ಟಾಟು ಮೊಣ್ಣಪ್ಪ ಮಾತನಾಡಿ ರಕ್ತದಾನದಿಂದ ರೋಗನಿರೋಧಕ ಶಕ್ತಿ ಉತ್ಪಾದನಾ ಸಾಮಥ್ರ್ಯವನ್ನು ಹೊಂದಲು ಸಾದ್ಯ ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಎ.ಪಿ. ದಿನೇಶ್ ಮಾತನಾಡಿ ನಿಸರ್ಗ ಜೆ.ಸಿಐ 13 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆ ಜೆಸಿ ವಾರ ಸಪ್ತಾಹದಡೀ ರಕ್ತದಾನ ಶಿಭಿರವನ್ನು ಆಯೋಜಿಸಿದೆ. ಕಳೆದ ಬಾರಿ 44 ಯೂನಿಟ್ ರಕ್ತ ಸಂಗ್ರಹಿಸಲಾಗಿತ್ತು ಎಂದು ತಿಳಿಸಿದರು.
ಮಡಿಕೇರಿ ರಕ್ತನಿಧಿ ಘಟಕದ ವೈದ್ಯ ಗೌತಮ್, ಜೆಸಿಐ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ ಉಪಸ್ಥಿತಿಯಲ್ಲಿ ಜೆಸಿ ವಾಣಿಯನ್ನು ಸತೀಶ್ ಸಿಂಗಿ, ಸ್ವಾಗತವನ್ನು ಸುರೇಶ್ ನಿರ್ವಹಿಸಿದರು. ಬಿ.ಯು. ಕಿರಣ್, ಸ್ವಾಮಿ, ಅಕ್ಷಯ್, ತನು, ಚಂಗಪ್ಪ ಸೇರಿದಂತೆ ಜೆಸಿಐ ಪದಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿದರು.











