ಮಡಿಕೇರಿ ಸೆ.10 : ಕೊಡಗು ಸೌಹಾರ್ದ ಪತ್ತಿನ ಸಹಕಾರ ಸಂಘದ ಮಹಾಸಭೆಯು ಮಡಿಕೇರಿ ಕೊಡವ ಸಮಾಜದ ಮೇಲಿನ ಕಟ್ಟಡದಲ್ಲಿ ಸಂಘದ ಅಧ್ಯಕ್ಷರಾದ ಮಂಡುವಂಡ ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯತು.
ಸಂಘವು ಅಭಿವೃದ್ಧಿಪಥದತ್ತ ಸಾಗುತ್ತಿದ್ದು, ಪ್ರಸ್ತುತ 2108 ಸದಸ್ಯರಿದ್ದಾರೆ. 89.75 ಲಕ್ಷ ರೂ. ಪಾಲುಹಣ ಹೊಂದಿದ್ದು, ಈ ಬಾರಿ 20 ಲಕ್ಷ ರೂ. ಲಾಭ ಗಳಿಸಿದೆ, ಸದಸ್ಯರಿಗೆ ಶೇ.9ರಷ್ಟು ಡಿವಿಡೆಂಟ್ ನೀಡಲಾಗುವುದು ಎಂದು ಮುತ್ತಪ್ಪ ತಿಳಿಸಿದರು.
ಸದಸ್ಯರ ಸಹಕಾರದಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ವಹಿವಾಟು ನಡೆಸುವ ಮೂಲಕ ಅಧಿಕ ಲಾಭದ ನಿರೀಕ್ಷೆಯಲ್ಲಿದ್ದೇವೆ ಎಂದರು. ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಾದ ಶಾಂತೆಯಂಡ ಯೋಗ್ ಕುಟ್ಟಪ್ಪ( 10 ನೇ ತರಗತಿ) ಹಾಗೂ ಕೇಕಡ.ಎಂ. ಬೋಪಣ್ಣ (ಪಿಯುಸಿ) ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಉಪಾಧ್ಯಕ್ಷೆ ಯಂ.ಜಿ.ಉಷಾ ವಂದಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಸಿ.ಸೀಮಾ ನಿರೂಪಿಸಿದರು.
ನಿರ್ದೇಶಕರುಗಳಾದ ಚೋವಂಡ. ಡಿ. ಕಾಳಪ್ಪ, ಆಲೆಮಾಡ ಕೆ. ಕಾರ್ಯಪ್ಪ, ಮಣವಟ್ಟಿರ .ಬಿ.ಮಾಚಯ್ಯ, ನಾಟೋಳಂಡ.ಡಿ.ಚರ್ಮಣ, ಕೊಂ ಗಂಡ ಎ.ತಿಮ್ಮಯ್ಯ, ಪಟ್ಟಡ ಎ.ಕರುಂಬಯ್ಯ, ಕುಡುವಂಡ ಬಿ.ಉತ್ತಪ್ಪ, ನಂದೇಟಿರ ಪಿ.ರಾಜಮಾದಪ್ಪ, ಕೇಕಡ ಎಂ.ಸುಗುಣ, ಬೇಬಿ ಪೂವಯ್ಯ, ಸದಸ್ಯರು ಹಾಗೂ ಸಂಘದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.