ನಾಪೋಕ್ಲು ಸೆ.11 : ಮಕ್ಕಳ ಲಾಲನೆ ಪಾಲನೆ ಜೊತೆಗೆ ಸರ್ವತೋಮುಖ ಅಭಿವೃದ್ಧಿಗೆ ತಾಯಿಯ ಪಾತ್ರ ಅನನ್ಯ ಎಂದು ಬೆಂಗಳೂರು ಜ್ಯೋತಿ ನಿವಾಸ್ ಕಾಲೇಜಿನ ನಿವೃತ್ತಿ ಡೀನ್ ಹಾಗೂ ಉಪ ಪ್ರಾಂಶುಪಾಲರಾದ ಕಾಂಡಂಡ ಉಷಾ ಜೋಯಪ್ಪ ಹೇಳಿದರು.
ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ ನ0.393 ನೇ ನಾಪೋಕ್ಲು ಸಹಕಾರ ಮಹಿಳಾ ಸಮಾಜದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ತಾಯಿ ತನ್ನ ಮಕ್ಕಳನ್ನು ತಿಳಿದಷ್ಟು ಬೇರೆಯವರು ತಿಳಿಯಲು ಸಾಧ್ಯವಿಲ್ಲ ಎಂದರು.
ಮಕ್ಕಳನ್ನು ಮೊಬೈಲಿಗೆ ದಾಸರಾಗುವಂತೆ ಪ್ರೇರೇಪಿಸದೆ ಸದ್ಗುಣಗಳನ್ನು ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಕನಸನ್ನು ಸಹಕಾರಗೊಳಿಸಿ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿಸಬೇಕೆಂದು ಉಷಾ ಜೋಯಪ್ಪ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಸಮಾಜದ ಅಧ್ಯಕ್ಷರಾದ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ ವಹಿಸಿ ಮಹಿಳಾ ಸಮಾಜದ ಕಾರ್ಯದಕ್ಷತೆಯ ಬಗ್ಗೆ ಹಾಗೂ ಮುಂದೆ ಕೈಗೊಳ್ಳಬೇಕಾದ ರೂಪುರೇಷೆಗಳ ಬಗ್ಗೆ ಸಭೆಗೆ ಮಾಹಿತಿಯನ್ನು ನೀಡಿ ಎಲ್ಲರೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿಕೊಂಡರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಬೊಪ್ಪಂಡ ಶೈಲಾ ಬೋಪಯ್ಯ, ನಿರ್ದೇಶಕರುಗಳಾದ ಬಿದ್ದಟ0ಡ ಗಿರಿಜಾ ಬೋಪಣ್ಣ, ಮುಂಡಂಡ ಸುಶೀಲಾ ಸೋಮಣ್ಣ, ಕೇಟೋಳಿರ ಶಾರದಾ ಪಳ0ಗಪ್ಪ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕುಂಡಿಯೊಳಂಡ ಕವಿತಾ ಮುತ್ತಣ್ಣ, ಅಪ್ಪಾರಂಡ ಡೇಸಿ ತಿಮ್ಮಯ್ಯ, ಪುಲ್ಲೆರ ಪದ್ಮಿನಿ ಭೀಮಯ್ಯ, ಕಾರ್ಯದರ್ಶಿ ಕೆ.ಎಚ್.ರಾಜೇಶ್ವರಿ ಲೋಕೇಶ್ , ಸಮಾಜದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೇಲೆಟಿರ ದಿವ್ಯ ಪ್ರಾರ್ಥನೆ ಮಾಡಿದರು. ರೇಷ್ಮಾ ಉತ್ತಪ್ಪ ಸ್ವಾಗತಿಸಿದರು. ಗಿರಿಜಾ ಬೋಪಣ್ಣ ಮುಖ್ಯ ಅತಿಥಿಯನ್ನು ಸಭೆಗೆ ಪರಿಚಯಿಸಿದರು. ಬೊಳ್ಳಮ್ಮ ನಾಣಯ್ಯ ಕಾರ್ಯಕ್ರಮವನ್ನು ನಿರೂಪಿಸಿ, ಶೈ ಲಾ ಬೋಪಯ್ಯ ವಂದಿಸಿದರು.
ವರದಿ : ದುಗ್ಗಳ ಸದಾನಂದ.