ಮಡಿಕೇರಿ ಸೆ.11 : ಗೌಳಿಬೀದಿಯ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಸ್ಪರ್ಧೆ ನಡೆಯಿತು.
ಗೌಳಿ ಸಮುದಾಯದವರು ಅನಾದಿ ಕಾಲದಿಂದಲೂ ವಿಶೇಷವಾಗಿ ಆಚರಿಸಿಕೊಂಡು ಬರುತ್ತಿರುವಂತೆ ಶ್ರೀ ಕೃಷ್ಣ ಜಯಂತಿಯನ್ನು ಈ ವರ್ಷವೂ ದೇವಾಲಯ ಸಮಿತಿಯಿಂದ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಮೊಸರು ಕುಡಿಕೆ ಒಡೆಯುವ ಸ್ಪರ್ಧಿಗಳಾಗಿ ಸಂತೋಷ್ ಹಾಗೂ ಮಹೇಶ್ ಭಾಗವಹಿಸಿದರು.
ಸ್ಪರ್ಧೆಗೂ ಮುನ್ನ ದೇವಾಲಯದಲ್ಲಿ ಶ್ರೀ ಕೃಷ್ಣನಿಗೆ ವಿಷೇಶ ಪೂಜೆ ಸಲ್ಲಿಸಿ ನಂತರ ಇಬ್ಬರು ಯುವಕರು ಮೊಸರು ಕುಡಿಕೆ ಒಡೆಯಲು ಮುಂದಾದರು.. ಯುವಕರು ನೀರಿನೇಟನ್ನು ಲೆಕ್ಕಿಸದೆ ವಾದ್ಯಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾ ಮೊಸರು ಕುಡಿಕೆ ಓಡೆಯುವಲ್ಲಿ ಯಶಸ್ವಿಯಾದರು.
ವಿಜೇತರಾದ ಸ್ಪರ್ಧಿಗಳಿಗೆ ದೇವಾಲಯದಲ್ಲಿ ಸಾಂಪ್ರದಾಯಕ ಬಹುಮಾನ ನೀಡಿ ಗೌರವಿಸಲಾಯಿತು.
ಪ್ರತೀ ವರ್ಷದಂತೆ ದೇವಾಲಯದಲ್ಲಿ ನಡೆದ ಪುಟಾಣಿ ಮಕ್ಕಳ ಶ್ರೀ ಕೃಷ್ಣ ಛದ್ಮವೇಷ ಹಾಗೂ ನೃತ್ಯ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.