ಸುಂಟಿಕೊಪ್ಪ ಸೆ.13 : ಶ್ರೀ ದೇವಿ ನಾರ್ಗಾಣೆ ಗ್ರಾಮದ ಶ್ರೀ ವಿನಾಯಕ ಸೇವಾ ಸಮಿತಿ ಶ್ರೀ ಗೌರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಶಿವಪ್ರಸಾದ್ ರೈ, ಪ್ರಧಾನ ಕಾರ್ಯದರ್ಶಿಯಾಗಿ ಆಕಾಶ್ ನೇಮಕಗೊಂಡಿದ್ದಾರೆ.
ಕಳೆದ 10 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಸಮಿತಿಗೆ ಉಪಾಧ್ಯಕ್ಷರಾಗಿ ವಿನೋದ್‍ಕುಮಾರ್, ಖಜಾಂಜಿಯಾಗಿ ಮಹೇಂದ್ರ (ಚಾಮಿ), ಸಹಕಾರ್ಯದರ್ಶಿ ಬಿ.ಕೆ.ರಾಜೇಶ್, ಸಮಿತಿ ಸದಸ್ಯರುಗಳಾಗಿ ಕಿರಣ್, ಮನೋಜ್, ರಾಜೇಶ್, ಆದರ್ಶ್, ವಿಷ್ಣು, ಮಧು, ಪ್ರಶಾಂತ್, ಕಾರ್ತಿಕ್, ಸುನಿಲ್ ಹಾಗೂ ಸುದಿ ನೇಮಕಗೊಳಿಸಲಾಯಿತು.