ಮಡಿಕೇರಿ ಸೆ.12 : ಮೊಗೇರ ಗ್ರಾಮ ವಿಕಾಸ ಯೋಜನೆಯ ಪ್ರಥಮ ವಾರ್ಷಿಕೋತ್ಸವ ಸೆ.17 ರಂದು ಸುಂಟಿಕೊಪ್ಪದಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 10.30 ಗಂಟೆಗೆ ಸುಂಟಿಕೊಪ್ಪದ ಶ್ರೀ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದಾರೆ ಎಂದು ಗ್ರಾಮ ವಿಕಾಸ ಯೋಜನೆಯ ಅಧ್ಯಕ್ಷ ಗೌತಮ್ ಶಿವಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಮೊಗೇರ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಪಿ.ಬಿ.ಜನಾರ್ಧನ, ರಾಜ್ಯ ಉಪಾಧ್ಯಕ್ಷ ಬಿ.ಶಿವಪ್ಪ, ಸ್ಥಾಪಕಾಧ್ಯಕ್ಷ ಟಿ.ಸದಾನಂದ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪಿ.ಎಂ.ರವಿ, ಮುದ್ದಕಳಲ ಯುವಕ ಸಂಘದ ಜಿಲ್ಲಾಧ್ಯಕ್ಷ ಜ್ಯೋತಿಕುಮಾರ್, ಸಿದ್ದಾಪುರ ಅಮೃತ ಮೊಗೇರ ಸಂಘದ ಅಧ್ಯಕ್ಷ ಮಂಜು ಬರಡಿ ಹಾಗೂ ಶಾಂತಳ್ಳಿ ಉಪ ತಹಶೀಲ್ದಾರ್ ತುಕ್ರಪ್ಪ ಪಾಲ್ಗೊಳ್ಳಲಿದ್ದಾರೆ.
ನಾಲ್ಕೇರಿ ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ಪಿ.ಕೆ.ಅಪ್ಪಯ್ಯ, ಮಡಿಕೇರಿ ಉಪ ಅರಣ್ಯ ವಲಯಾಧಿಕಾರಿ ಪಿ.ಟಿ.ರಾಘವ, ಸೋಮವಾರಪೇಟೆ ವೈಲ್ಡ್ ಲೈಫ್ ಡಿ.ಆರ್.ಎಫ್.ಓ ಪಿ.ಟಿ.ಶಶಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಅಧೀಕ್ಷಕ ಬಾಬು, ಶೇಷಪ್ಪ ಹೆಬ್ಬಾಲೆ, ಲೋಕಯ್ಯ ಹಾಕತ್ತೂರು, ಮೊಗೇರ ಸೇವಾ ಸಮಾಜದ ಸ್ಥಾಪಕ ಸದಸ್ಯರಾದ ಸಿ.ಲೋಹಿತ್, ಅಕ್ಕಮ್ಮ ಮೂರ್ತಿ, ಪ್ರೇಮ ಆನಂದ ಸುಂಟಿಕೊಪ್ಪ, ಎಮ್ಮೆಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೆ.ಜಿ.ರಮ್ಯ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಗೌತಮ್ ಶಿವಪ್ಪ ಮಾಹಿತಿ ನೀಡಿದ್ದಾರೆ.










