ಮಡಿಕೇರಿ ಸೆ.12 : ಕೇರಳದ ಕಣ್ಣೂರು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಕಣ್ಣೂರ್ ಯೂನಿವರ್ಸಿಟಿ ಸಿಂಥೆಟಿಕ್ ಸ್ಟೇಡಿಯಂ ಮಾಗಟು ಪರಂಬದಲ್ಲಿ ನಡೆದ 2ನೇ ಕೇರಳ ರಾಜ್ಯ ಮಾಸ್ಟರ್ಸ್ ಮಾನ್ಸೂನ್ ಓಪನ್ ಅಥ್ಲೆಟಿಕ್ ಮೀಟ್-2023 ರ 55+ ಸ್ಪರ್ಧೆಯಲ್ಲಿ ಮಡಿಕೇರಿಯ ಬಿ.ವಸಂತಿ ಅವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
400ಮೀ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ, 200ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, 100ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಹಾಗೂ ರಿಲೇ ಯಲ್ಲಿ ಚಿನ್ನದ ಪದಕ ಗೆದ್ದು ಕೊಡಗಿಗೆ ಕೀರ್ತಿ ತಂದಿದ್ದಾರೆ.
ವಸಂತಿ ಅವರು ಮಡಿಕೇರಿ ಆಸ್ಪತ್ರೆಯಿಂದ ವರ್ಗಾವಣೆಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸೀನಿಯರ್ ನರ್ಸಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.









