ಮಡಿಕೇರಿ ಸೆ.12 : ಮೂರ್ನಾಡು ಸಮುದಾಯ ಭವನದಲ್ಲಿ ಪೋಷಣ್ ಮಾಸಾಚರಣೆ ನಡೆಯಿತು.
ಮೂರ್ನಾಡು ವೃತ್ತಕ್ಕೆ ಸಂಬಂಧಿಸಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪಾಲ್ಗೊಂಡ ಫಲಾನುಭವಿಗಳು ವಿವಿಧ ರೀತಿಯ ಆಹಾರಗಳನ್ನು ತಯಾರಿಸಿ ಪ್ರದರ್ಶಿಸಿದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಸವಿತ ಕೀರ್ತನ್ ಪೋಷಣ್ ಮಾಸಾಚರಣೆಯ ಉದ್ದೇಶ, ಪೌಷ್ಟಿಕ ಆಹಾರದ ಮಹತ್ವ, ಮಾತೃವಂದನ ಸಪ್ತಾಹ, ಆಹಾರದಲ್ಲಿರುವ ಔಷಧೀಯ ಗುಣಗಳು, ಪೌಷ್ಟಿಕತೆಯ ಬಗ್ಗೆ ಮಾಹಿತಿ ನೀಡಿದರು.