ಮಡಿಕೇರಿ ಸೆ.12 : ವಿರಾಜಪೇಟೆ ತಾಲ್ಲೂಕು ಕೊಡಗು ಮಾಜಿ ಸೈನಿಕರ ಸಹಕಾರ ಸಂಘ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ಸೆ.20 ರಂದು ಬೆಳಗ್ಗೆ 10.30 ಗಂಟೆಗೆ ಚಪ್ಪಂಡ ಹರೀಶ್ ಉತ್ತಯ್ಯ ಅಧ್ಯಕ್ಷತೆಯಲ್ಲಿ ‘ಅಮರ ಜವಾನ ಸ್ಮಾರಕ’ದಲ್ಲಿ ನಡೆಯಲಿದೆ.
ಹಾಗೆಯೇ ಯೋಧರ ಸ್ಮಾರಕ ಸ್ಥಂಭದ ಆವರಣದಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್ ತುಕಡಿಯ ಗೌರವದೊಂದಿಗೆ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ದೇಶ ರಕ್ಷಣೆಗಾಗಿ ಹುತಾತ್ಮರಾದ ಯೋಧರಿಗೆ ಹಾಗೂ ದಿವಂಗತ ಮಾಜಿ ಯೋಧರಿಗೆ ಶ್ರದ್ಧಾಂಜಲಿಯನ್ನು ಸಂಘದ ವತಿಯಿಂದ ಅರ್ಪಿಸಲಾಗುವುದು.
ಕರ್ನಲ್ ಮಂಡೆಟಿರ ಅವಿನ್ ಉತ್ತಯ್ಯ(ಸೇನಾ ಮೆಡಲ್), ಕರ್ನಲ್ ಮಾಚಿಮಂಡ ಡಿ.ಮುತ್ತಪ್ಪ, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಎಂ.ಪಿ.ಸುಜಾ ಕುಶಾಲಪ್ಪ, ತಹಶೀಲ್ದಾರರಾದ ಎಚ್.ಎನ್.ರಾಮಚಂದ್ರ, ವಿರಾಜಪೇಟೆ ಡಿವೈಎಸ್‍ಪಿ ಆರ್.ಮೋಹನ್ ಕುಮಾರ್, ವಿರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಕುಮಾರ್, ಕೊಂಗಂಡ ಬೋಜಮ್ಮ ಮುತ್ತಣ್ಣ ಇತರರು ಪಾಲ್ಗೊಳ್ಳಲಿದ್ದಾರೆ.










