ಮಡಿಕೇರಿ ಸೆ.12 : ಕೊಡಗು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಕೈಮೀರುತ್ತಿದೆ. ಸಿದ್ದಾಪುರದ ಮಾಲ್ದಾರೆ- ಹುಂಡಿ ಗ್ರಾಮ ವ್ಯಾಪ್ತಿಯಲ್ಲಿ 20 ಕ್ಕೂ ಅಧಿಕ ಸಂಖ್ಯೆಯ ಗಜ ಪರಿವಾರ ಹಾಡಹಗಲೇ ಸಂಚರಿಸುತ್ತಿದ್ದು, ಗ್ರಾಮಸ್ಥರಲ್ಲಿ ಜೀವಭಯ ಮೂಡಿದೆ.
ಕಳೆದ ಒಂದು ವಾರದಿಂದ ತೋಟದಿಂದ ತೋಟಕ್ಕೆ ಸಂಚರಿಸುತ್ತಿರುವ ಕಾಡಾನೆಗಳ ಹಿಂಡು ಅಪಾರ ನಷ್ಟ ಉಂಟು ಮಾಡಿವೆ. ಮೂರಕ್ಕೂ ಹೆಚ್ಚು ಮರಿಗಳ ಸಹಿತ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿರುವ ಗಜ ಪರಿವಾರದಿಂದ ಕಾರ್ಮಿಕರು ತೋಟಗಳಿಗೆ ಕೆಲಸಕ್ಕೆ ಬರುತ್ತಿಲ್ಲ. ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲು ಧೈರ್ಯ ತೋರುತ್ತಿಲ್ಲ. ವಾಹನ ಚಾಲಕರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾಗಿದೆ.
ಮರಿಗಳು ಜೊತೆಯಲ್ಲೇ ಇರುವುದರಿಂದ ಮನುಷ್ಯರ ಮೇಲೆ ದಿಢೀರ್ ದಾಳಿ ನಡೆಸುವ ಸಾಧ್ಯತೆಗಳೇ ಹೆಚ್ಚಾಗಿದೆ. ಅರಣ್ಯ ಸಿಬ್ಬಂದಿಗಳು ಆನೆಗಳನ್ನು ಕಾಡಿಗಟ್ಟಿದರೂ ಮರಳಿ ಬಂದು ತೋಟಗಳಲ್ಲಿ ನೆಲೆ ನಿಲ್ಲುತ್ತಿವೆ. ಪರಿಸ್ಥಿತಿ ಕೈಮೀರುವ ಹಂತದಲ್ಲಿದ್ದು, ಅರಣ್ಯ ಇಲಾಖೆ ಕೂಡ ಅಸಹಾಯಕವಾಗಿದೆ.
ಕಾಡಾನೆಗಳ ದಾಳಿಯನ್ನು ತಡೆಯಲು ಸರ್ಕಾರ ಶಾಶ್ವತ ಪರಿಹಾರ ಸೂಚಿಸಬೇಕೆಂದು ಕಳೆದ ಒಂದು ದಶಕದಿಂದ ಗ್ರಾಮಸ್ಥರು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಕಾಡಾನೆ ದಾಳಿಗೆ ಸಿಲುಕಿ ಅಮಾಯಕ ಜೀವಗಳು ನಿರಂತರವಾಗಿ ಬಲಿಯಾಗುತ್ತಿವೆಯೇ ಹೊರತು ದಾಳಿ ತಡೆಗೆ ಇನ್ನೂ ಕೂಡ ಮಾರ್ಗೋಪಾಯಗಳನ್ನು ಕಂಡುಕೊoಡಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ ಮಾಲ್ದಾರೆ- ಹುಂಡಿ ಗ್ರಾಮ ಗಜ ದಿಗ್ಬಂಧನದAತ್ತಾಗಿದೆ.
Breaking News
- *ಮಡಿಕೇರಿಯಲ್ಲಿ ‘ಹುತಾತ್ಮರ ದಿನಾಚರಣೆ’ : ಮಹಾತ್ಮ ಗಾಂಧಿ ಸ್ಮರಣೆ*
- *ಮಡಿಕೇರಿಯಲ್ಲಿ ಹುತಾತ್ಮರ ದಿನಾಚರಣೆ : ಮಹಾತ್ಮ ಗಾಂಧಿ ಸ್ಮರಣೆ*
- *ಚೆಯ್ಯಡಾಂಣೆಯಲ್ಲಿ ಪಿಂಚಣಿ ಆದಲತ್ : ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ಪ್ರತಿ ಹಸ್ತಾಂತರ*
- *ಸ್ಪ್ರಿಂಕ್ಲರ್ ಗೆ ಶೇ.90 ರಷ್ಟು ಸಹಾಯಧನ*
- *ಜ.31 ರಂದು ಮುಖ್ಯಮಂತ್ರಿಗಳಿಂದ ಭಾಗಮಂಡಲ ಸೇತುವೆ ಉದ್ಘಾಟನೆ : ಅಭಿವೃದ್ಧಿ ಪಥದತ್ತ ಕೊಡಗು : ಟಿ.ಪಿ.ರಮೇಶ್ ಬಣ್ಣನೆ*
- *ಸಾಲ ಪಡೆದವರಿಗೆ ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ಇದೆಯೇ ಎಂದು ಗಮನಿಸಿ : ಆರ್ಬಿಐ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ ನಿರ್ದೇಶನ*
- *ದುರ್ಬಲ ವರ್ಗದ ಧ್ವನಿ ವೈ.ಕೆ.ಗಣೇಶ್ ಗೆ ಗೋಣಿಕೊಪ್ಪದಲ್ಲಿ ನುಡಿನಮನ : ಆದಿವಾಸಿ ಮಕ್ಕಳಿಗೆ ಶಿಕ್ಷಣದಿಂದ ಬಲ ತುಂಬಿ : ಕೇರಳ ಸಚಿವ ಓ.ಆರ್.ಕೇಳು ಕರೆ*
- *ದೊಡ್ಡಮಳ್ತೆಯಲ್ಲಿ ಮಕ್ಕಳ ಗ್ರಾಮಸಭೆ : ವಿವಿಧ ಸಮಸ್ಯೆಗಳ ಕುರಿತು ಗಮನ ಸೆಳೆದ ವಿದ್ಯಾರ್ಥಿಗಳು*
- *ಬ್ಯಾಂಕ್ ಆಫ್ ಬರೋಡಾದ ನವೀಕೃತ ಆವರಣ ಉದ್ಘಾಟನೆ*
- *ಅರ್ಚಕರ ಮೇಲೆ ಹಲ್ಲೆ : ಕೊಡಗು ಬಿಜೆಪಿ ಖಂಡನೆ*