ವಿರಾಜಪೇಟೆ ಸೆ.13 : ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ 2023-24ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕುಂಬೆಯಂಡ ಸುರೇಶ್ ದೇವಯ್ಯ ಪ್ರಧಾನ ಕಾರ್ಯದರ್ಶಿಯಾಗಿ ಜೂಡಿವಾಜ್ ಮರು ಆಯ್ಕೆಯಾಗಿದ್ದಾರೆ.
ಉಪದ್ಯಕ್ಷರಾಗಿ ಪಿ.ಎಂ.ದಿನೇಶ್ ಕಾವೇರಪ್ಪ, ಖಜಾಂಚಿಯಾಗಿ ವಿ.ಎ.ದಿನೇಶ್ ಮತ್ತು ಸಂಘದ ನಿರ್ದೇಶಕರಾಗಿ ಬಿ.ವಿ.ವಿನಂತು, ಎಂ.ಕೆ.ಮಹೇಶ್, ಅಜಯ್, ಬಿ.ಜಿ.ನಾಗೇಶ್, ಸದಾ ಪೂಣಚ್ಚ, ಕುಪ್ಪಂಡ ಪ್ರಸಾದ್ ದೇವಯ್ಯ, ಮತ್ತು ಕೆ.ಎನ್. ಜೀವನ್ ನಾಣಯ್ಯ ಮಾಹಾಸಭೆಯಲ್ಲಿ ಸರ್ವನೂಮತದಿಂದ ಆಯ್ಕೆಗೊಂಡರು.
ಕೊಡಗು ಖಾಸಗಿ ಬಸ್ ಕಾರ್ಮಿಕ ಸಂಘ ವಿರಾಜಪೇಟೆ ಸಂಘದ ಕಚೇರಿಯಲ್ಲಿ ನಡೆದ
ಮಾಹಸಭೆಯಲ್ಲಿ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುರೇಶ್ ದೇವಯ್ಯ, ಬಸ್ಸು ಕಾರ್ಮಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಸ್ಸುಗಳ ನಿರ್ವಹಣೆಗೆ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದ ಕಾರ್ಮಿಕರು ಕಷ್ಟಪಡುವಂತಾಗಿದೆ. ಸಂಘದ ಸದಸ್ಯರ ಏಳಿಗೆಗೆ ಸಂಘವು ಸದಾಕಾಲ ಶ್ರಮಿಸುತ್ತದೆ ಎಂದು ಹೇಳಿದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ