ಮಡಿಕೇರಿ ಸೆ.14 : ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ಹಿಂದಿ ದಿವಸವನ್ನು ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಹಿಂದಿ ದಿವಸದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಶುದ್ಧ ಉಚ್ಚಾರಣ್ ಹಾಗೂ ದೋಹಾ ವಾಚನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಶುದ್ಧ ವಿಚಾರಣ್ ಸ್ಪರ್ಧೆಯಲ್ಲಿ ದ್ವಿತೀಯ ಬಿಸಿಎ ಯ ಜಿ. ಆರ್.ವಿಘ್ನೇಶ್ ಪ್ರಥಮ, ಎಂ.ಎಂ. ಭಜನ್ ದ್ವಿತೀಯ ಸ್ಥಾನ ಪಡೆದರು.
ದೋಹಾ ವಾಚನದಲ್ಲಿ ಪ್ರಥಮ ಬಿಸಿಎ ಯ ಜಾಸ್ಮಿನ್ ಪ್ರಥಮ ಹಾಗೂ ಬಿಬಿಎ ಯ ಇಂಷಾ ರಣೀಮ್ ದ್ವಿತೀಯ ಸ್ಥಾನ ಪಡೆದರು.
ತೀರ್ಪುಗಾರರಾಗಿ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಕ್ರಿಸ್ಟಿನಾ, ಹಿಂದಿ ಶಿಕ್ಷಕರಾದ ಅಬ್ದುಲ್ ಮುನೀರ್ ಕಾರ್ಯನಿರ್ವಹಿಸಿದರು.
ಹಿಂದಿ ವಿಭಾಗದ ಮುಖ್ಯಸ್ಥೆ ಸಿ.ಎ.ದೀಪ , ಹಿಂದಿ ಪ್ರಾಧ್ಯಾಪಕಿ ಬಿ. ಎ.ಶಶಿಕಲಾ ಹಾಜರಿದ್ದರು.
ವಿದ್ಯಾರ್ಥಿನಿ ಬಿ.ಬಿ. ಹಿಂದಿ ದಿವಸದ ಮಹತ್ವವನ್ನು ಕುರಿತು ಮಾತನಾಡಿದರು. ವಿದ್ಯಾರ್ಥಿನಿ ಸನ ಸ್ವಾಗತಿಸಿ, ನಿರೂಪಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಹಿಂದಿ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.