ಮಡಿಕೇರಿ, ಸೆ.15 : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವದ ಹಿನ್ನೆಲೆಯಲ್ಲಿ ಸೆ.16 ರಂದು ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಮೇಳೈಸಲಿವೆ.
ಬೆಳಿಗ್ಗೆ 10 ಗಂಟೆಯಿಂದ ಪತ್ರಕರ್ತರು ಮತ್ತು ಅವರ ಕುಟುಂಬದ ಸದಸ್ಯರಿಗೆ ವಿವಿಧ ಮನರಂಜನಾ ಸ್ಪರ್ಧೆಗಳ ಮೋಜು ಅನಾವರಣಗೊಳ್ಳಲಿದೆ.
ಬಳಿಕ ಮಧ್ಯಾಹ್ನ 1.30ರಿಂದ ಜಿಲ್ಲೆಯ ಪ್ರತಿಷ್ಠಿತ ನೃತ್ಯ ತರಬೇತು ಸಂಸ್ಥೆಗಳ ಮಕ್ಕಳಿಂದ ಮೈನವಿರೇಳಿಸುವ ನೃತ್ಯ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ನೃತ್ಯೋತ್ಸವದಲ್ಲಿ ಪಾಲ್ಗೊಳ್ಳಲಿರುವ ಸಂಸ್ಥೆಗಳ ಕಿರುಪರಿಚಯ ಇಲ್ಲಿದೆ.
ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋ, ಮಡಿಕೇರಿ
ಕಳೆದ ನಾಲ್ಕು ವರ್ಷಗಳ ಹಿಂದೆ ಆರಂಭವಾದ ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋ ಅಭಿಷೇಕ್ ಸಾರಥ್ಯದಲ್ಲಿ ನಡೆಯುತ್ತಿದೆ. ನಾಲ್ಕು ಬಾರಿ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಸಂಸ್ಥೆ, ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದೆ. ಸೋಮವಾರಪೇಟೆಯ ಎಡಿಸಿ ಡ್ಯಾನ್ಸ್ ಸ್ಪರ್ಧೆಯಲ್ಲಿ ಪ್ರಥಮ, ಕುಶಾಲನಗರದ ಡ್ಯಾನ್ಸ್ ಬೀಟ್ಸ್ ಚಾಂಪಿಯನ್‍ಶಿಪ್‍ನಲ್ಲಿ ಪ್ರಥಮ, ಗೋಣಿಕೊಪ್ಪಲಿನ ರಾಜ್ಯ ಮಟ್ಟದ ಕಲೋತ್ಸವ ಚಾಂಪಿಯನ್‍ಶಿಪ್‍ನಲ್ಲಿ ಪ್ರಥಮ, 2022ರ ಯುವ ದಸರಾದಲ್ಲಿ ಪ್ರಥಮ ಸ್ಥಾನ, ಕುಶಾಲನಗರ ಟೈಂ ಬ್ರೇಕರ್ಸ್ ನಡೆಸಿಕೊಟ್ಟ ಸ್ಪರ್ಧೆಯಲ್ಲಿ ಪ್ರಥಮ, ಗೋಣಿಕೊಪ್ಪ ಸಪ್ತ ಸ್ವರ ಸ್ಪರ್ಧೆಯಲ್ಲಿ ಪ್ರಥಮ, ನಾಪೋಕ್ಲು ಡ್ಯಾನ್ಸ್ ರೆವಲ್ಯೂಷನ್‍ನಲ್ಲಿ ಪ್ರಥಮ ಸ್ಥಾನ ಪಡೆದಿದೆ. ಕಳೆದ ಮೂರು ವರ್ಷಗಳಿಂದ ರಾಜ್ಯ ಮಟ್ಟದ 100ಕ್ಕೂ ಅಧಿಕ ಸ್ಪರ್ಧೆಗಳಲ್ಲಿ ಭಾಗಿಯಾಗಿರುವ ಸಂಸ್ಥೆ, ಅನೇಕ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡು ಬೆಸ್ಟ್ ಕೊರಿಯೋಗ್ರಾಫರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಏಂಜಲ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್, ಕುಶಾಲನಗರ
• 2013ರಲ್ಲಿ ಕೇವಲ ಐವರು ವಿದ್ಯಾರ್ಥಿಗಳೊಂದಿಗೆ ಆರಂಭವಾದ ಸಂಸ್ಥೆ, 2014ರ `ದಸರಾ ಚಿತ್ತಾರ’ದ ಮೂರು ವಿಭಾಗಗಳಲ್ಲೂ ಪ್ರಥಮ ಸ್ಥಾನ ಬಾಚಿಕೊಂಡಿದೆ. ಮಡಿಕೇರಿ ದಸರಾದಲ್ಲಿ ಮೊಟ್ಟ ಮೊದಲಿಗೆ ಪುಟಾಣಿಗಳ ನೃತ್ಯ ವೈಭವ ಪ್ರದರ್ಶನ. 2016ರಲ್ಲಿ ಕಸ್ತೂರಿ ವಾಹಿನಿಯ `ಪುಟಾಣಿ ಪಂಟ್ರು’ ರಿಯಾಲಿಟಿ ಶೋನಲ್ಲಿ ಭಾಗಿ. ರಾಷ್ಟ್ರೀಯ ಭೋಗನಂದೀಶ್ವರ, ರಾಷ್ಟ್ರೀಯ ನಾಟ್ಯ ಕಲಾ ತಿಲಕ, ರಾಷ್ಟ್ರೀಯ ನಾಟ್ಯ ರತ್ನಾಕರ, ರಾಷ್ಟ್ರೀಯ ನಾಟ್ಯಕಲಾ ನಂದಿ, ರಾಷ್ಟ್ರೀಯ ನಾಟ್ಯ ಕಲಾ ಸಿಂಚನ ಇತ್ಯಾದಿ ಅಸಂಖ್ಯ ರಾಷ್ಟ್ರೀಯ ಬಿರುದುಗಳನ್ನು ಮುಡಿಗೇರಿಸಿಕೊಂಡಿದೆ. ಎಕ್ಸಲೆಂಟ್ ಮಲ್ಟಿ ಟ್ಯಾಲೆಂಟೆಡ್ ಕಿಡ್, ನೃತ್ಯ ಮೇದಿನಿ, ಯಂಗ್ ಸ್ಟಾರ್, ಸ್ಕೇಟಿಂಗ್ ಸ್ಟಾರ್, ನೋವೈಸ್ ಇತ್ಯಾದಿ ಬಿರುದಾವಳಿಗಳನ್ನು ಪಡೆದಿದೆ. ಭತರನಾಟ್ಯಂ, ವೆಸ್ಟರ್ನ್ ಹಾಗೂ ಸ್ಕೇಟಿಂಗ್ – ಈ ಮೂರು ವಿಭಾಗದಲ್ಲೂ ವಿಶ್ವ ದಾಖಲೆಯ ಕಿರೀಟ. ಥೈಲ್ಯಾಂಡ್‍ನಲ್ಲಿ ನಡೆದ ಅಂತರಾಷ್ಟ್ರೀಯ ನೃತ್ಯ ಸಮ್ಮೇಳನದಲ್ಲಿ ಭಾಗವಹಿಸಿ `ಗ್ಲೋಬಲ್ ಸ್ಟಾರ್’ ಎಂಬ ಮೆಚ್ಚುಗೆ ಗಳಿಸಿದೆ. ಸಂಸ್ಥೆಯ ಸಂಸ್ಥಾಪಕರು ಹಾಗೂ ಸಂಯೊಜಕರಾದ ಏಂಜಲ್ ರಶ್ಮಿ ಡಿಸೋಜಾ ಮತ್ತು ಅರ್ಪಿತ್ ಅನೂಪ್ ಡಿಸೋಜಾ ಅವರಿಗೆ `ಏಷ್ಯನ್ ಬೆಸ್ಟ್ ಕೊರಿಯೋಗ್ರಾಫರ್, ಲೆಜೆಂಡ್ ಕೊರಿಯೋಗ್ರಾಫರ್, ಟ್ಯಾಲೆಂಟ್ ಐಕಾನ್, ಎಮಿನೆಂಟ್ ಕೊರಿಯೋಗ್ರಾಫರ್ ಇತ್ಯಾದಿ ಬಿರುದುಗಳು ಸಂದಿವೆ. ಥೈಲ್ಯಾಂಡ್ ನೃತ್ಯ ಪ್ರದರ್ಶನದಲ್ಲಿ ಸಿಕ್ಕ ಮೆಚ್ಚುಗೆಯಿಂದಾಗಿ, ಮಲೇಷಿಯಾ ಅಂತರಾಷ್ಟ್ರೀಯ ಫೆಸ್ಟಿವಲ್‍ಗೆ ಆಹ್ವಾನ ಸಿಕ್ಕಿದೆ. ಇಂಡಿಯನ್ ಬುಕ್ ಆಫ್ ರೆಕಾರ್ಡ್‍ನಲ್ಲಿ ಪಾಲ್ಗೊಳ್ಳುವ ಸದವಕಾ± ಸಂಸ್ಥೆಗೆ ಸಿಕ್ಕಿದೆ.
ಕಲಾ ಕಾವ್ಯ ನಾಟ್ಯಶಾಲೆ, ಮಡಿಕೇರಿ
ನಾಟ್ಯ ವಿದುಷಿ ಕಾವ್ಯಶ್ರೀ ಕಪಿಲ್ ಸಾರಥ್ಯದ ಕಲಾ ಕಾವ್ಯ ನಾಟ್ಯ ಶಾಲೆ ಐದು ವರ್ಷಗಳ ಹಿಂದೆ ಮಡಿಕೇರಿಯಲ್ಲಿ ಆರಂಭವಾಯ್ತು. ಭರತ ನಾಟ್ಯದಲ್ಲಿ ವಿದ್ವತ್ ಪದವಿ ಪಡೆದಿರುವ ಕಾವ್ಯಶ್ರೀ ನೂರಾರು ಮಕ್ಕಳಿಗೆ ಭರತನಾಟ್ಯ ನೃತ್ಯ ತರಬೇತಿ ನೀಡುತ್ತಿದ್ದಾರೆ. ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಪದವಿ ಪೂರ್ವ ಶಿಕ್ಷಣ ಮಂಡಳಿಯ ಕೆಎಸ್‍ಇಇಬಿ ಭರತನಾಟ್ಯ ಪರೀಕ್ಷೆ ಸೇರಿದಂತೆ ಅನೇಕ ಭರತನಾಟ್ಯ ಸ್ಪರ್ಧೆಗಳ ತೀರ್ಪುಗಾರರಾಗಿ ಪಾಲ್ಗೊಂಡಿರುವ ಇವರು, ಯುವಜನ ಮೇಳದಲ್ಲಿ ಸತತ ಆರು ಬಾರಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ರಂಗನಿರ್ದೇಶಕಿಯಾಗಿ, ಹಾಡುಗಾರ್ತಿಯಾಗಿ, ಯಕ್ಷಗಾನ ಕಲಾವಿದೆಯಾಗಿ, ಜಾನಪದ ನೃತ್ಯ ಪ್ರಾಕಾರಗಳ ನೃತ್ಯ ಮತ್ತು ತರಬೇತುದಾರರಾಗಿ ಗಮನ ಸೆಳೆದಿದ್ದಾರೆ. ಇವರಿಗೆ ಯುಜನವ ಸಂಯುಕ್ತ ಮಂಡಳಿಯಿಂದ ಕಲಾ ಗೌರವ, ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್‍ನಿಂದ ಕಲಾ ರತ್ನ, ಎಜಿಎಲ್ ಗ್ರೂಪ್ ಆಫ್ ಲರ್ನಿಂಗ್ ವತಿಯಿಂದ ಆರ್ಟಿಸ್ಟ್ ಆಫ್ ದಿ ಇಯರ್ ಪ್ರಶಸ್ತಿ ಸಂದಿದೆ.
ಕಿಂಗ್ಸ್ ಆಫ್ ಕೂರ್ಗ್ ಡ್ಯಾನ್ಸ್ ಇನ್ಸ್‍ಟಿಟ್ಯೂಷನ್
ಮಡಿಕೇರಿಯಲ್ಲಿ ಕೊರಿಯೋಗ್ರಾಫರ್ ಮತ್ತು ನೃತ್ಯಪಟು ಮಹೇಶ್ ಹಾಗೂ ಕಿರಣ್ ಸಾರಥ್ಯದಲ್ಲಿ ಆರಂಭವಾಗಿರುವ ಕಿಂಗ್ಸ್ ಆಫ್ ಕೂರ್ಗ್ ಡ್ಯಾನ್ಸ್ ಇನ್ಸ್‍ಟಿಟ್ಯೂಷನ್, ಸ್ಪೋಟ್ರ್ಸ್ ಡ್ಯಾನ್ಸ್ ಚಾಂಪಿಯನ್ ಶಿಪ್‍ನಲ್ಲಿ 45 ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕೊಡಗು ಉತ್ಸವ, ಮಡಿಕೇರಿ ದಸರಾ, ಹಿಪ್ ಹಾಪ್ ಚಾಂಪಿಯನ್ ಶಿಪ್, ಮಡಿಕೇರಿ ಮತ್ತು ಗೋಣಿಕೊಪ್ಪಲು ಯುವ ದಸರಾ, ದಸರಾ ಚಿತ್ತಾರ ಇತ್ಯಾದಿ ಸುಮಾರು 250ಕ್ಕೂ ಹೆಚ್ಚಿನ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಪಾಲ್ಗೊಂಡು ಪ್ರಶಸ್ತಿ ಪಡೆದಿದ್ದಾರೆ.
ಈ ಸಂಸ್ಥೆಗಳಲ್ಲದೆ, ಕುದುಕುಳಿ ಮಿಲನ ಭರತ್ ಸಾರಥ್ಯದ ಭಾಗಮಂಡಲದ ಅಭಿನಯ ಕಲಾ ಮಿಲನಚಾರಿಟೇಬಲ್ ಟ್ರಸ್ಟ್, ಕೊಡವ ಸಮಾಜ ಪೊಮ್ಮಕ್ಕಡ ಕೂಟ, ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕ ಹಾಗೂ ದಿನೇಶ್ ಸಾರತ್ಯದ ಗುರುಕುಲ ಕಲಾ ಮಂಡಳಿಯ ಸ್ಕೂಲ್ ಆಫ್ ಪರ್ಫಾಮಿರ್ಂಗ್ ಆಟ್ರ್ಸ್ ಸಂಸ್ಥೆಯ ವಿದ್ಯಾರ್ಥಿಗಳಿಂದಲೂ ಆಕರ್ಷಕ ನೃತ್ಯ ಪ್ರದರ್ಶನವಿದೆ.











