ಸಿದ್ದಾಪುರ ಸೆ.15 : ರಾಜ್ಯ ದಲ್ಲಿ ನೂತನ ಶಿಕ್ಷಣ ನೀತಿಗೆ ಸಮಿತಿ ರಚಿಸುವಂತೆ ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್ ನ ರಾಜ್ಯಾಧ್ಯಕ್ಷೆ ವೀಣಾ ನಾಯ್ಕ್ ಒತಾಯಿಸಿದ್ದಾರೆ.
ಪತ್ರಿಕಾ ಪ್ರಕಟನೆ ನೀಡಿದ ಅವರು, ಬಹುತ್ವಕ್ಕೆ ಒತ್ತು ನೀಡುವ ಅವೈಜ್ಞಾನಿಕ ಶಿಕ್ಷಣ ನೀತಿಯನ್ನು ರದ್ದುಗೊಳಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಸ್ವಾಗತ ವ್ಯಕ್ತಪಡಿಸಿದ ಅವರು ಶಿಕ್ಷಣ ತಜ್ಞರು ಹಾಗೂ ವಿದ್ಯಾರ್ಥಿ ಸಂಘಟನೆಯನ್ನು ಒಳಗೊಂಡಂತೆ ಸಮಿತಿ ರಚನೆ ಮಾಡುವಂತೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು.
ಶಿಕ್ಷಣವು ಸಮವರ್ತಿ ಪಟ್ಟಿಗೆ ಒಳಪಡುವುದರಿಂದ ಸಂವಿಧಾನಾತ್ಮಕ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಮುಂದಾಗ ಬೇಕಿದೆ ಎಂದರು. ಪ್ರಸ್ತುತ ವಿದ್ಯಾರ್ಥಿಗಳಿಗೆ ಮೌಢ್ಯ, ಕಂದಾಚಾರಗಳನ್ನ ಒಗಲಾಡಿಸುವ ವೈಜ್ಞಾನಿಕ ಶಿಕ್ಷಣ ನೀತಿ ಜಾರಿಯಾಗ ಬೇಕಿದೆ ಎಂದರು.
ದತ್ತು ನಿರ್ಧಾರಕ್ಕೆ ವಿರೋಧ:- ಸರಕಾರಿ ಶಾಲೆ ಮತ್ತು ಕಾಲೇಜುಗಳನ್ನು ಸಬಲೀಕರಣಗೊಳಿಸುವ ಹಿನ್ನೆಲೆಯಲ್ಲಿ ಖಾಸಾಗಿಯವರಿಗೆ ದತ್ತು ನೀಡುವ ಸರಕಾರದ ನಿರ್ಧಾರವನ್ನು ಶ್ರವಣ ಬೆಳಗೊಳದಲ್ಲಿ ನಡೆದ ಎ.ಐ.ಎಸ್.ಎಫ್ 16ನೇ ರಾಜ್ಯ ಸಮ್ಮೇಳನದಲ್ಲಿ ಬಲವಾಗಿ ವಿರೋಧಿಸಿದ್ದು, ಸರ್ಕಾರಿ ಶಾಲೆ ಕಾಲೇಜುಗಳ ಬಲವರ್ಧನೆ ಗೆ ಅಗತ್ಯ ಕ್ರಮ ಕೈಗೊಳ್ಳಬೇಕು, ಖಾಲಿ ಇರುವ ಶಿಕ್ಷಕರ ಮತ್ತು ಉಪನ್ಯಾಸಕರ ನೇಮಕಾತಿ ಮಾಡಬೇಕು, ಅತಿಥಿ ಶಿಕ್ಷಕರ, ಉಪನ್ಯಾಸಕರನ್ನು ಖಾಯಂಗೊಳಿಸಲು ಮುಂದಾಗ ಬೇಕು, ಶಾಲಾ ಕಾಲೇಜು ಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.








