ಮಡಿಕೇರಿ ಸೆ.15 : ಕಾನೂನು ಮಾಪನ ಶಾಸ್ತ್ರ ನೀರಿಕ್ಷಕರು ಮಡಿಕೇರಿ ಕಚೇರಿ ವತಿಯಿಂದ ತಾತ್ಕಾಲಿಕ ಶಿಬಿರವು ಸೆ.14 ರಿಂದ ಸೆ.21 ರವರೆಗೆ ವಿರಾಜಪೇಟೆಯ ಫೆಡರೇಷನ್ ಮಿಲ್ ಆವರಣದಲ್ಲಿ ನಡೆಯಲಿದೆ.
ವಿರಾಜಪೇಟೆ ನಗರ ಮತ್ತು ಸುತ್ತಮುತ್ತಲಿನ ವರ್ತಕರು ಮತ್ತು ತೂಕ ಅಳತೆ ಉಪಯೋಗದಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮಲ್ಲಿರುವ ತೂಕ ಅಳತೆ ಸಾಧನೆಗಳಿಗೆ ಸತ್ಯಾಪನೆ ಮುದ್ರೆ ಮಾಡಿಸಿಕೊಳ್ಳಬೇಕೆಂದು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಮಡಿಕೇರಿ ಉಪ ವಿಭಾಗ ನಿರೀಕ್ಷಕರಾದ ಡಿ.ಆರ್ ಲಿಂಗರಾಜು ತಿಳಿಸಿದ್ದಾರೆ.









