ಮಡಿಕೇರಿ ಸೆ.16 : ಶ್ರೀ ಸಿದ್ದೇಶ್ವರ ಮತ್ತು ಶ್ರೀ ಬಸವೇಶ್ವರ ಹಾಗೂ ಸೋಮವಾರಪೇಟೆ ತಾಲ್ಲೂಕು ದೊಡ್ಡಮಳ್ತೆ ಗ್ರಾಮದ ಸ್ವರ್ಣಗೌರಿ ಹೊನ್ನಮ್ಮ ಟ್ರಸ್ಟ್ ವತಿಯಿಂದ ಇತಿಹಾಸ ಪ್ರಸಿದ್ದ ಶ್ರೀಕ್ಷೇತ್ರ ಹೊನ್ನಮ್ಮನ ಕೆರೆಗೆ ಶ್ರೀಸ್ವರ್ಣಗೌರಿ ಮಹೋತ್ಸವದ ಅಂಗವಾಗಿ ಶ್ರೀ ಹೊನ್ನಮ್ಮ ತಾಯಿಗೆ ಬಾಗಿನ ಅರ್ಪಣೆ ಕಾರ್ಯಕ್ರಮವು ಸೆ.18 ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ.
ದೇವಾಲಯ ಸಮಿತಿಯ ಅಧ್ಯಕ್ಷ ಡಿ.ಬಿ.ವೀರೇಶ, ಉಪಾಧ್ಯಕ್ಷ ಡಿ.ಎಂ.ಪ್ರಸನ್ನ, ಕಾರ್ಯದರ್ಶಿ ಎಂ.ಜೆ.ಕಿರಣ್ ಕುಮಾರ್, ಸದಸ್ಯರಾದ ಎಂ.ಬಿ.ವಸಂತಕುಮಾರ, ಕೆ.ಕೆ.ರವಿ, ಡಿ.ಬಿ.ಮಧು, ಡಿ.ಯು.ಹರ್ಷಿತ್, ಡಿ.ಬಿ.ಶಶಿಧರ, ಡಿ.ಕೆ.ಲೋಕೇಶ್, ಡಿ.ಕೆ.ಶಾಂತಪ್ಪ, ಡಿ.ಎಚ್.ರತನ್, ಎಂ.ಎಲ್.ಆಕಾಶ್, ಡಿ.ಬಿ.ರಾಜು, ಕೆ.ಬಿ.ಪುಷ್ಪಾಧರ, ಪ್ರಧಾನ ಅರ್ಚಕರಾದ ವೀರಯ್ಯ ಹಿರೇಮಠ್, ಇತರರು ಪಾಲ್ಗೊಳ್ಳಲಿದ್ದಾರೆ.









