ಮಡಿಕೇರಿ ಸೆ.16 : ಕೊಡಗು ಜಿಲ್ಲಾ ಮಹಾಬೋಧಿ ಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ರೂ.76,206 ರಷ್ಟು ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಸಿ.ಸತೀಶ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಂಘವು ಪ್ರಸ್ತುತ 1322 ಮಂದಿ ಸದಸ್ಯರುಗಳನ್ನು ಹೊಂದಿದ್ದು, ಸದಸ್ಯರಿಂದ ರೂ.11,47,300 ಲಕ್ಷ ಪಾಲು ಬಂಡವಾಳ ಸಂಗ್ರಹಿಸಲಾಗಿದೆ. ಸಂಘದ ದುಡಿಯುವ ಬಂಡವಾಳವು ರೂ. 16,79,100 ಆಗಿದ್ದು, ಸಂಘ ಪ್ರಸ್ತುತ ರೂ.4,70,040 ರಷ್ಟು ವಿವಿಧ ಠೇವಣಿಗಳನ್ನು ಹೊಂದಿರುತ್ತದೆ. ಹಾಗೂ ಸಂಘವು ಸದಸ್ಯರುಗಳಿಗೆ ಜಾಮೀನು ಸಾಲವನ್ನು ನೀಡುತ್ತಿದ್ದು, ಇದುವರೆಗೆ ರೂ.17,08,549 ಗಳಷ್ಟು ಸದಸ್ಯರಿಗೆ ಜಾಮೀನು ಸಾಲವಾಗಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಸಂಘದಲ್ಲಿರುವ ಠೇವಣಿಗಳಿಗೆ ಕನಿಷ್ಠ ಶೇ.2 ರಿಂದ ಗರಿಷ್ಠ ಶೇ.8 ರವರೆಗೆ ಆಕರ್ಷಕ ಬಡ್ಡಿ ನೀಡಲಾಗುತ್ತಿದೆ. ಹಿರಿಯ ನಾಗರೀಕರಿಗೆ 8.5 ರಷ್ಟು ಬಡ್ಡಿ ನೀಡಲಾಗುತ್ತಿದ್ದು, ಗ್ರಾಹಕರು ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಸಂಘದ ವ್ಯವಹಾರ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಲಾಭದಲ್ಲಿದೆ. ಸಂಘದಲ್ಲಿ ಪ್ರಸ್ತುತ ಮರಣೋತ್ತರ ಸಹಾಯಧನ ನಿಧಿ ಯೋಜನೆ ಜಾರಿಯಲ್ಲಿದೆ. ಹೊಸದಾಗಿ ಸೇರ್ಪಡೆಗೊಳ್ಳುವ ಸದಸ್ಯರುಗಳು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದು ಹಾಗೂ ಸದಸ್ಯರುಗಳು ತೆಗೆದುಕೊಳ್ಳುವ ಸಾಲದ ಮೇಲೆ ಜೀವವಿಮೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಹಾಸಭೆ :: ಮಹಾಬೋಧಿ ಪತ್ತಿನ ಸಹಕಾರ ಸಂಘದ 8ನೇ ಮಹಾಸಭೆಯು ಸೆ.17 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬೆಳಗ್ಗೆ 10.30 ಗಂಟೆಗೆ ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸರ್ವ ಸದಸ್ಯರು ಸಭೆಗೆ ಹಾಜರಾಗುವಂತೆ ಸತೀಶ್ ಮನವಿ ಮಾಡಿದ್ದಾರೆ.