ಮಡಿಕೇರಿ ಸೆ.18 : ಕೊಡಗು ಜಿಲ್ಲೆಯ ಗಡಿಗ್ರಾಮ ಕರಿಕೆಯ ಇಬ್ಬರು ಗ್ರಾಮೀಣ ಪ್ರತಿಭೆಗಳು ಚಿತ್ರರಂಗ ಪ್ರವೇಶಿಸಿದ್ದಾರೆ.
ಕನ್ನಡ ಮಿಶ್ರಿತ ಮಲೆಯಾಳಂ ಚಲನಚಿತ್ರ “ನದಿಗಳಿಲ್ ಸುಂದರಿ ಯಮುನಾ” ದಲ್ಲಿ ಕರಿಕೆಯ ನಾಗರಾಜ್ ಹಾಗೂ ರಾಜೇಂದ್ರ ಅಭಿನಯಿಸಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿ ಡಬ್ಬಿಂಗ್ ಕಾರ್ಯವನ್ನೂ ನಿಭಾಯಿಸಿದ್ದಾರೆ.
ವಿಲಾಸ್ ಕುಮಾರ್ ಹಾಗೂ ಸಿಮಿ ಮುರಳಿ ನಿರ್ಮಾಪಕರಾಗಿರುವ, ವಿಜೇಶ್ ಪಾನತ್ತೂರು ಹಾಗೂ ಉಣ್ಣಿ ವೆಲ್ಲೂರ್ ನಿರ್ದೇಶನದ “ನದಿಗಳಿಲ್ ಸುಂದರಿ ಯಮುನಾ” ಸೆ.15 ರಂದು ಕೇರಳ ರಾಜ್ಯದೆಲ್ಲೆಡೆ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಟರುಗಳಾದ ಧ್ಯಾನ್ ಶ್ರೀನಿವಾಸನ್ ಹಾಗೂ ಅಜು ವರ್ಗಿಸ್ ಪ್ರಮುಖ ಪಾತ್ರದಲ್ಲಿದ್ದಾರೆ.
ಚಿತ್ರರಂಗದಲ್ಲಿ ಮತ್ತಷ್ಟು ಅವಕಾಶಗಳು ದೊರೆಯುವ ಕುರಿತು ಕರಿಕೆಯ ಕಲಾವಿದರುಗಳಾದ ನಾಗರಾಜ್ ಹಾಗೂ ರಾಜೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.











