ನಾಪೋಕ್ಲು ಸೆ.20 : ಶೌರ್ಯ ತಂಡದ ಸದಸ್ಯರಿಂದ ನಾಪೋಕ್ಲುವಿನ ರಾಮಮಂದಿರದ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು.
ದೇವಾಲಯದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ನಾಪೋಕ್ಲು ರಾಮ ಮಂದಿರದ ಸುತ್ತಮುತ್ತಲಿದ್ದ ಕಸ, ಕಡ್ಡಿಗಳನ್ನು ಹೆಕ್ಕಿ ಸ್ವಚ್ಚಗೊಳಿಸಲಾಯಿತು.
ದೇವಾಲಯದ ಅರ್ಚಕ ರವಿ ಉಡುಪ ಅವರ ಮಾರ್ಗದರ್ಶನದಂತೆ ಸಂಯೋಜಕಿ ದಿವ್ಯ, ಗೀತಾ, ಉಮಾಲಕ್ಷ್ಮಿ, ಶ್ಯಾಮಲಾ, ದಿಲೀಶ್, ಶಂಕರ್, ರವಿ, ವಸಂತ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ