ಮಡಿಕೇರಿ ಸೆ.20 : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ 9 ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಆರಂಭಿಸಿರುವ ಪಾದಯಾತ್ರೆಯ ಮೊದಲ ಹಂತ ಕೆದಕಲ್ ಮೂಡಗೇರಿ ನಾಡ್ ಮಂದ್ ನಲ್ಲಿ ಪೂರ್ಣಗೊಂಡಿದೆ. 2ನೇ ಹಂತದ ಪಾದಯಾತ್ರೆ ಸೆ.27 ರಿಂದ “ಕುರುಳಿ ಅಂಬಲ” ಮಂದ್ ನಿಂದ ಆರಂಭಗೊಳ್ಳಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಮೊದಲ ಹಂತದ ಕೊನೆಯ ದಿನದ ಪಾದಯಾತ್ರೆ ಮತ್ತು ಕೊಡವ ಜಾಗೃತಿ ಸಭೆ ಪಾಲೇರಿನಾಡ್ ಮಂದ್ ಹಾಗೂ ಮೂಡಗೇರಿ ನಾಡ್ ಮಂದ್ ನಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ನಾಚಪ್ಪ ಅವರು ಮೊದಲ ಹಂತದ ಪಾದಯಾತ್ರೆ ಯಶಸ್ವಿಯಾಗಿದ್ದು, ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದೆ ಎಂದರು.
ಕೊಡವರ ರಕ್ಷಣೆಗಾಗಿ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಬೇಡಿಕೆ ಈಡೇರುವವರೆಗೆ ಸಿಎನ್‍ಸಿ ಸಂಘಟನೆ ಶಾಂತಿಯುತ ಹೋರಾಟವನ್ನು ಮುಂದುವರೆಸಲಿದೆ. ಕೊಡವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಐದು ಹಂತಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಮೊದಲ ಹಂತ ಈಗಾಗಲೇ ಪೂರ್ಣಗೊಂಡಿದೆ. ಉಳಿದಿರುವ ನಾಲ್ಕು ಹಂತಗಳ ಪಾದಯಾತ್ರೆಗೆ ಸರ್ವ ಕೊಡವರು ಸಹಕರಿಸುವಂತೆ ಮನವಿ ಮಾಡಿದರು.
ಪಾಲೇರಿನಾಡ್ ಮಂದ್ ನಲ್ಲಿ ಮರುವಂಡ ಸತ್ಯ ಕಾರ್ಯಪ್ಪ, ಬಿಜ್ಜಂಡ ಪೊನ್ನಪ್ಪ, ಮುದ್ದುರ ಗಣಪತಿ, ಮುಲುವೆರ ಬಿದ್ದಪ್ಪ, ಒಡ್ಡಚೆಟ್ಟಿರ ತಮ್ಮಯ್ಯ, ಮರುವಂಡ ಸೋಮಣ್ಣ, ಮುಲುವೆರ ಅಯ್ಯಪ್ಪ, ಅಯ್ಯಕುಟ್ಟೀರ ಮಾದಪ್ಪ, ಮುದ್ದುರ ಪೊನ್ನಣ್ಣ, ಅಯ್ಯಕುಟ್ಟೀರ ತಿಮ್ಮಯ್ಯ, ಅಯ್ಯಕುಟ್ಟೀರ ಗಗನ್ ಸುಬ್ಬಯ್ಯ, ಅಯ್ಯಕುಟ್ಟೀರ ಸದಾ ಮುತ್ತಪ್ಪ, ಮುದ್ದುರ ಪೊನ್ನಪ್ಪ, ಮರುವಂಡ ತಿಮ್ಮಯ್ಯ, ಮುಲುವೆರ ಅಪ್ಪಣ್ಣ, ಅಯ್ಯಕುಟ್ಟೀರ ಮಾದಪ್ಪ, ಮೇದುರ ಕಂಠಿ, ಮೋರ್ಕಂಡ ಬೋಪಣ್ಣ, ಪುದಿಯೊಕ್ಕಡ ಪೃಥ್ವಿ, ಅಪ್ಪಾರಂಡ ಪ್ರಸಾದ್ ಕುಶಾಲಪ್ಪ, ಅರೆಯಡ ಗಿರೀಶ್, ಚೋಳಪಂಡ ನಾಣಯ್ಯ, ಚೋಳಪಂಡ ಜ್ಯೋತಿ ನಾಣಯ್ಯ, ಮುಲುವೆರ ನಂಜಪ್ಪ, ಮರುವಂಡ ಸಾಬು, ಮುಲುವೆರ ಅಯ್ಯಪ್ಪ, ಮುಲುವೆರ ಬಿದ್ದಪ್ಪ, ಅಯ್ಯಕುಟ್ಟೀರ ಸದಾ, ಮುದ್ದುರ ಸುಬ್ಬಯ್ಯ, ಕೆದಕಲ್ ಮೂಡಗೇರಿ ನಾಡ್ ಮಂದ್ ನಲ್ಲಿ ಪುಲ್ಲೇರ ಕಾಳಪ್ಪ, ಪುಲ್ಲೇರ ಸ್ವಾತಿ ಕಾಳಪ್ಪ, ಪುಲ್ಲೇರ ಬೋಪಯ್ಯ, ಪುಲ್ಲೇರ ಕನ್ನಿಕೆ ಬೋಪಯ್ಯ, ಪುಲ್ಲೇರ ಅಶ್ವಿತ್ ಸೋಮಯ್ಯ, ಪುಲ್ಲೇರ ವಸಂತ, ಪುಲ್ಲೇರ ಪೆಮ್ಮಯ್ಯ, ಪುಲ್ಲೇರ ಜಮುನಾ ವಸಂತ, ಪುಲ್ಲೇರ ತಿಮ್ಮಯ್ಯ, ಚೆಪ್ಪುಡಿರ ರಾಜ ಚಿಣ್ಣಪ್ಪ, ಚೆಪ್ಪುಡಿರ ಸುನೀತ ಚಿಣ್ಣಪ್ಪ, ಕೋನೇರಿರ ಮನೋಹರ್, ಚೇಂದ್ರಿಮಾಡ ಡಾಲಿ ಕರುಂಬಯ್ಯ, ಚೇಂದ್ರಿಮಾಡ ಶಿವ ಸೋಮಣ್ಣ, ಅರೆಯಡ ಗಿರೀಶ್, ಪುದಿಯೊಕ್ಕಡ ಬೋಪಣ್ಣ, ಅಪ್ಪಾರಂಡ ಪ್ರಸಾದ್, ಚೋಳಪಂಡ ನಾಣಯ್ಯ, ಚೋಳಪಂಡ ಜ್ಯೋತಿ ನಾಣಯ್ಯ, ಉದ್ದಿನಾಡಂಡ ಸೋಮಯ್ಯ, ಉದ್ದಿನಾಡಂಡ ಪಾರ್ವತಿ ಸೋಮಯ್ಯ, ಪುಲ್ಲೇರ ತಿಮ್ಮು ತಿಮ್ಮಯ್ಯ, ನಂದಿನೆರವಂಡ ಅಪ್ಪಯ್ಯ, ನಂದಿನೆರವಂಡ ಅಯ್ಯಣ್ಣ, ನಂದಿನೆರವಂಡ ಮಧು, ನಂದಿನೆರವಂಡ ವಿಜು, ನಂದಿನೆರವಂದ ನಿಶಾ, ನಂದಿನೆರವಂಡ ನಂದಾ, ನಂದಿನೆರವಂಡ ಬಿದ್ದಪ್ಪ, ನಂದಿನೆರವಂಡ ಡಾ.ಪ್ರಕಾಶ್ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
::: 2ನೇ ಹಂತದ ಪಾದಯಾತ್ರೆ :::
ಎರಡನೇ ಹಂತದ ಯಾತ್ರೆಯಲ್ಲಿ ಸೆ.27 ರಂದು ಬೆಳಗ್ಗೆ 9 ಗಂಟೆಗೆ ಮತ್ತೆ ಮಡಿಕೇರಿ ತಾಲ್ಲೂಕು “ಪೊರೆನಾಲ್‍ನಾಡ್’+’ನೂರೊಕ್ಕನಾಡ್’ “ಕುರುಳಿ ಅಂಬಲ” ಮಂದ್ ನಿಂದ ಪುನರಾರಂಭಗೊಂಡು ನೆಲ್ಲಿಯಪುದಿಕೇರಿನಾಡ್ ಮಧ್ಯಾಹ್ನ 12 ಗಂಟೆಗೆ ಕಟ್ಟೆಮಾಡ್, 3.30 ಗಂಟೆಗೆ ಅರೆಕಾಡ್ ಮಂದ್‍ನಲ್ಲಿ ಕಾರ್ಯಕ್ರಮ, ಸೆ.28 ರಂದು ಬೆಳಗ್ಗೆ 10ಕ್ಕೆ ಕಾಣತ್ತ್ ಮೂರ್ನಾಡ್ (ಮೂರ್ನಾಡ್-ಐಕೊಳ) (ಮಡಿಕೇರಿ ತಾಲ್ಲೂಕು) ಮಧ್ಯಾಹ್ನ 3 ಗಂಟೆಗೆ ಪಾಲಂದ ಮಂದ್, ಹಾಲುಗುಂದ. ಸಂಜೆ 5.30 ಗಂಟೆಗೆ ಚೆಂಬೆಬೆಳಿಯೂರ್ (ವಿರಾಜಪೇಟೆ ತಾಲ್ಲೂಕು), ಸೆ.29 ರಂದು ಬೆಳಗ್ಗೆ 10 ಗಂಟೆಗೆ ಎಡೆನಾಲ್‍ನಾಡ್ (ಮಗ್ಗುಲ), 2 ಗಂಟೆಗೆ ಕಳ್ಳಿರ ಬಾಣೆ ಮಂದ್ ಉಮ್ಮತನಾಡ್ ಅಮ್ಮತ್ತಿ-ಬಿಳುಗುಂದ (ವಿರಾಜಪೇಟೆ ತಾಲ್ಲೂಕು)ದಲ್ಲಿ ನಡೆಯಲಿದೆ ಎಂದು ನಾಚಪ್ಪ ತಿಳಿಸಿದ್ದಾರೆ.










