ಮಡಿಕೇರಿ ಸೆ.20 : ಪ್ರಸಕ್ತ(2023-24) ಸಾಲಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಭಾಗವಹಿಸಿದ ಪುರುಷ ಹಾಗೂ ಮಹಿಳೆಯರಿಗೆ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆಗಳು ಇಲಾಖಾ ವತಿಯಿಂದ ಸೆಪ್ಟೆಂಬರ್, 27 ರಂದು ನಡೆಯಲಿದೆ.
ಮಡಿಕೇರಿ ತಾಲ್ಲೂಕಿನಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವು ಸೆಪ್ಟೆಂಬರ್, 27 ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. (ಅಥ್ಲೆಟಿಕ್ಸ್, ವಾಲಿಬಾಲ್, ಫುಟ್ಬಾಲ್(ಪುರುಷರಿಗೆ ಮಾತ್ರ), ಖೋಖೋ, ಕಬಡ್ಡಿ, ಬಾಸ್ಕೇಟ್ ಬಾಲ್, ಕುಸ್ತಿ, ಷಟಲ್ ಬ್ಯಾಡ್ಮಿಂಟನ್, ಹಾಕಿ, ಹ್ಯಾಂಡ್‍ಬಾಲ್, ಟೇಬಲ್ ಟೆನ್ನಿಸ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್, ಯೋಗ) (ಮುಕ್ತ ಪಂದ್ಯಾವಳಿ ಪುರುಷ ಹಾಗೂ ಮಹಿಳೆಯರಿಗೆ).
ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಲಾಗುವ ಕ್ರೀಡೆ: ಸೆಪ್ಟೆಂಬರ್, 27 ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಟೆನ್ನಿಸ್, ನೆಟ್‍ಬಾಲ್, ಈಜು ಸ್ಪರ್ಧೆ ನಡೆಯಲಿದೆ.
ಈಜು ಸ್ಪರ್ಧೆಯಲ್ಲಿ ಆಯ್ಕೆ ಮಾಡಲಾಗುವ ಕ್ರೀಡೆಗಳು ಸೆಪ್ಟೆಂಬರ್, 27 ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಜು-100, 200, 400 ಮೀ. ಫ್ರೀ ಸ್ಟೈಲ್, 100, 200 ಬ್ಯಾಕ್ ಸ್ಟ್ರೋಕ್, 100, 200 ಮೀ. ಬ್ರೆಸ್ಟ್, 100 ಮೀ. ಬಟರ್ ಫೈ, 200 ಮೀ ಇಂಡಿವಿಜಯಲ್ ಮಿಡ್ಲೆ, 4*100 ಮೀ. ಫ್ರೀ ಸ್ಟೈಲ್ ರಿಲೇ (ಮುಕ್ತ ಪಂದ್ಯಾವಳಿ, ಪುರುಷ ಹಾಗೂ ಮಹಿಳೆಯರಿಗೆ).
ಜಿಲ್ಲೆಯ ಆಸಕ್ತ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ ಮಡಿಕೇರಿ ತಾಲ್ಲೂಕು ಮನು 9480032712, ಗಣಪತಿ 8951287301 ನ್ನು ಸಂಪರ್ಕಿಸಬಹುದು.
ತಾಲ್ಲೂಕು ಮಟ್ಟದದಲ್ಲಿ ನಡೆದ ಅಥ್ಲೆಟಿಕ್ಸ್ (ವೈಯಕ್ತಿಕ ಸ್ಪರ್ಧೆ), ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನ ಹಾಗೂ ಗುಂಪು ಸ್ಪರ್ಧೆ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಹಾಗೂ ತಂಡಗಳಿಗೆ ಮಾತ್ರ ಅವಕಾಶ. ಜಿಲ್ಲಾ ಮಟ್ಟಕ್ಕೆ ಭಾಗವಹಿಸುವ ಕ್ರೀಡಾಪಟುಗಳು ಆಧಾರ ಕಾರ್ಡ್ ಜೆರಾಕ್ಸ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್ ಹಾಗೂ 2 ಭಾವಚಿತ್ರ ಕಡ್ಡಾಯವಾಗಿ ತರಬೇಕು. ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾ ಪಟುಗಳಿಗೆ ಲಘು ಊಟೋಪಹಾರ ವ್ಯವಸ್ಥೆ ಇರುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾಯ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ತಿಳಿಸಿದ್ದಾರೆ.









