ಸುಂಟಿಕೊಪ್ಪ ಸೆ.20 : ಕೊಡಗರಹಳ್ಳಿ ಶಾಂತನಿಕೇತನ ಶಾಲೆಯ ವಿದ್ಯಾರ್ಥಿಗಳಾದ ನೇಹ ಅನೀಶ್ ಹಾಗೂ ಡೆಲೀಶಾ ಮುತ್ತಮ್ಮ ಜೋಡಿ ಷಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಮಡಿಕೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ತೋರುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನೇಹ ಅನೀಶ್ ಕೊಡಗರಹಳ್ಳಿ ಶಾಂತನಿಕೇತನ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಡೆಲೀಶಾ ಸಿಂಗಲ್ಸ್ ನಲ್ಲೂ ಉತ್ತಮ ಸಾಧನೆ ತೋರಿದ್ದು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.











