ನಾಪೋಕ್ಲು ಸೆ.21 : ಶೌರ್ಯ ತಂಡದ ವತಿಯಿಂದ ಬಾವಲಿ ಗ್ರಾಮದ ಮುಖಂಡಬಾಣೆ ಸಮುದಾಯ ಭವನ ಸೇರಿಂದತೆ ವಿವಿಧೆಡೆ ಸ್ವಚ್ಛತಾ ಶ್ರಮದಾನ ನಡೆಯಿತು.
ಶೌರ್ಯ ತಂಡದ ಸ್ವಯಂ ಸೇವಕರು ಸಮುದಾಯ ಭವನದ ಸುತ್ತು ಮುತ್ತು ಹಾಗೂ ರಸ್ತೆ ಬದಿಯಲ್ಲಿ ಬೆಳೆದಿದ್ದ ಗಿಡ ಗಂಟಿಗಳು ಕಡಿದು ಸ್ವಚ್ಛಗೊಳಿಸಿದರು.
ಈ ಸಂದರ್ಭ ಶೌರ್ಯ ತಂಡದ ಸದಸ್ಯರಾದ ಚೇತನ್, ದೇವಪ್ಪ, ಸುದೀಪ್, ಚರಣ್, ನವೀನ್, ನಿತಿಶ್ ಮತ್ತು ರಾಜೇಶ್ ಪಾಲ್ಗೊಂಡಿದ್ದರು.
ನಿರಂತರ ಸಾರ್ವಜನಿಕರ ಸೇವೆಯಲ್ಲಿ ತೊಡಗಿಕೊಂಡಿರುವ ಶೌರ್ಯ ತಂಡದ ಬಗ್ಗೆ ಗ್ರಾಮಸ್ಥರು ಪ್ರಶಾಂಸೆ ವ್ಯಕ್ತಪಡಿಸಿದರು.
ವರದಿ : ದುಗ್ಗಳ ಸದಾನಂದ.








