ಮಡಿಕೇರಿ ಸೆ.21 : ಚೇರಂಬಾಣೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ 2023-28ರ ಅವಧಿಗೆ ಆಡಳಿತ ಮಂಡಳಿಗೆ ಸಾಲಗಾರರ ಕ್ಷೇತ್ರದಿಂದ 12 ಮಂದಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಾಕಿ ಇರುವ ಸಾಲಗಾರರಲ್ಲದ ಒಂದು ಸ್ಥಾನಕ್ಕೆ ಸೆ.24 ರಂದು ಚುನಾವಣೆ ನಡೆಯಲಿದೆ.
ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಬಾಚರಣಿಯಂಡ ಸುಮನ್, ಅಯ್ಯಂಡ ಸತೀಶ್ ಬೆಳ್ಯಪ್ಪ, ಮುಕ್ಕಾಟಿ ನಾಣಯ್ಯ, ಪೋಡೊನೋಳನ ಶ್ರೀನಿವಾಸ್, ಕೂರನ ಕಿಶೋರ್ ಕುಮಾರ್, ಕುಂಞ್ಞಳಿ ಸಂತೋಷ್ ಕುಮಾರ್, ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದಿಂದ ಕೂರನ ಸುಶೀಲ ಅಪ್ಪಾಜಿ, ಚೀಯಬೆರ ವೀಣಾ ಸೋಮಯ್ಯ, ಬಿಸಿಎಂ (ಎ) ಕ್ಷೇತ್ರದಿಂದ ನಾಳಿಯಮ್ಮಂಡ ಜೀವನ್, ಬಿಸಿಎಂ (ಬಿ) ಕ್ಷೇತ್ರದಿಂದ ಕೇಕಡ ಸುಗುಣ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಸರಸಮ್ಮ ಹಾಗೂ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಎಂ.ಕೆ.ವಸಂತ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ 12 ನಿರ್ದೇಶಕರಲ್ಲಿ 11 ಮಂದಿ ಬಿಜೆಪಿ ಬೆಂಬಲಿತರಾಗಿದ್ದಾರೆ.








