ಮಡಿಕೇರಿ ಸೆ.21 : ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ನಿನಾದ ಶಾಲೆಯ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ವಿಭಾಗದ ಕ್ರೀಡಾಕೂಟದಲ್ಲಿ ಬಾಲಕರ ತಂಡದ ರಾಹಿಲ್, ಪ್ರಶಾಂತ್, ರಮೀಜ್ ದ್ವಿತೀಯ ಸ್ಥಾನ ಪಡೆದುಕೊಂಡು ವಿಭಾಗ ಮಟ್ಟಕ್ಕೆ ಆಯ್ಕೆಯಾದರು.
ಪ್ರೌಢ ಶಾಲಾ ವಿಭಾಗದ ಬಾಲಕಿಯರ ತಂಡದ ತಶ್ಫಿಯಾ, ಗಾಯನ ದ್ವಿತೀಯ ಸ್ಥಾನ ಪಡೆದುಕೊಂಡು ವಿಭಾಗಿಯ ಮಟ್ಟಕ್ಕೆ ಆಯ್ಕೆಯಾದರು.
ವಿದ್ಯಾರ್ಥಿಗಳಿಗೆ ತರಬೇತುದಾರ ಹೆಚ್.ಹೆಚ್.ಆದರ್ಶ್ ತರಬೇತಿ ನೀಡಿದ್ದಾರೆ.
ಶಾಲೆಯ ಆಡಳಿತಾಧಿಕಾರಿ ಕೆ.ಸಿ.ನಾಗೇಶ್ ಹಾಗೂ ಮುಖ್ಯೋಪಾಧ್ಯಯರಾದ ಸಿ.ಆರ್.ಶಿಲ್ಪಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.










