ಮಡಿಕೇರಿ ಸೆ.22 : ಪ್ರಶಸ್ತಿ ವಿಜೇತ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಕಥೆ ಮತ್ತು ನಿರ್ದೇಶನದ, ಸ್ವಸ್ತಿಕ್ ಎಂಟರ್ ಟೈನ್‌ಮೆಂಟ್ ನ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ಮಾಣದ “ಪೊಮ್ಮಾಲೆ ಕೊಡಗ್” ಕೊಡವ ಸಿನಿಮಾ ಡೆಹ್ರಡೂನ್ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಗೆ ಆಯ್ಕೆಯಾಗಿದ್ದು, ಸೆ.23 ರಂದು ಮಧ್ಯಾಹ್ನ 1 ಗಂಟೆಗೆ ಪ್ರದರ್ಶನಗೊಳ್ಳುತ್ತಿದೆ.
ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ಚಿತ್ರ ಇದು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕನ್ನಡ, ತುಳು, ಕೊಂಕಣಿ ಹಾಗೂ ಕೊಡವ ಭಾಷೆಯ ಸುಮಾರು 73 ಚಿತ್ರಗಳು ಆಯ್ಕೆಗಾಗಿ ಅರ್ಜಿ ಸಲ್ಲಿಸಿದ್ದವು. ಆದರೆ ಅಂತಿಮವಾಗಿ ಕೊಡವ ಸಂಸ್ಕೃತಿ, ಆಚಾರ, ವಿಚಾರ, ಪ್ರಕೃತಿಯ ಮೇಲೆ ಬೆಳಕು ಚೆಲ್ಲಿದ “ಪೊಮ್ಮಾಲೆ ಕೊಡಗ್” ಚಿತ್ರ ಮಾತ್ರ ಆಯ್ಕೆಯಾಗುವಲ್ಲಿ ಯಶಸ್ವಿಯಾಯಿತು.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು, ವಿಶಿಷ್ಟವಾದ ಕೊಡಗಿನ ಸಂಸ್ಕೃತಿಗೆ ಸಿಕ್ಕಿದ ಗೌರವ ಇದಾಗಿದೆ. ಕೊಡಗಿನ ಸಂಸ್ಕೃತಿ ಮತ್ತು ಪ್ರಕೃತಿಯನ್ನು ನೈಜವಾಗಿ ಚಿತ್ರಿಸಿದ ತೃಪ್ತಿ ನನಗಿದೆ. ನನ್ನ ಚಿತ್ರಗಳ ಮೂಲಕ ಕೊಡಗಿನ ಸೌಂದರ್ಯ ಹಾಗೂ ಸಂಸ್ಕೃತಿಯನ್ನು ದೇಶ ವಿದೇಶಕ್ಕೆ ಪರಿಚಯಿಸುತ್ತಿದ್ದೇನೆ. ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಗಳಲ್ಲಿ ನನ್ನ ಚಿತ್ರಗಳು ಪ್ರದರ್ಶನ ಕಾಣುವ ಮೂಲಕ ಕೊಡಗಿನ ಸೊಬಗು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ ಎಂದರು.
ಮಹಾರಾಷ್ಟ್ರದ ಔರಂಗಬಾದ್ ಶಿಲೋಡಿನಲ್ಲಿ ಐಡಿಯಲ್ ಅಂತರ ರಾಷ್ಟ್ರೀಯ ಸಿನಿಮೋತ್ಸವದಲ್ಲಿ “ಪೊಮ್ಮಾಲೆ ಕೊಡಗ್” ನ ನನ್ನ ನಿರ್ದೇಶನಕ್ಕೆ “ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ” ಬಂದಿರುವುದು ಮತ್ತಷ್ಟು ಸಂತಸ ತಂದಿದೆ ಎಂದು ಪ್ರಕಾಶ್ ಕಾರ್ಯಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.
ನಿರ್ಮಾಪಕಿ ಯಶೋಧ ಕಾರ್ಯಪ್ಪ ಅವರು ಕೂಡ ಡೆಹ್ರಡೂನ್ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಗೆ ಕೊಡವ ಸಿನಿಮಾವೊಂದು ಆಯ್ಕೆಯಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
::: “ಪೊಮ್ಮಾಲೆ ಕೊಡಗ್” ಚಿತ್ರ ತಂಡ :::
ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ನಿರ್ಮಾಪಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್, ಸಾಹಿತ್ಯ ಆಪಾಡಂಡ ಜಗ ಮೊಣ್ಣಪ್ಪ, ನಿರ್ಮಾಣ ನಿಯಂತ್ರಕರಾಗಿ ಬೊಳ್ಳಜಿರ ಬಿ.ಅಯ್ಯಪ್ಪ, ಈರಮಂಡ ವಿಜಯ್ ಉತ್ತಯ್ಯ, ಛಾಯಾಗ್ರಾಹಕರಾಗಿ ಶಿವಕುಮಾರ್ ಅಂಬಲಿ ಕಾರ್ಯನಿರ್ವಹಿಸಿದ್ದು, ವಿಠಲ್ ರಂಗದೋಳ್ ಸಂಗೀತ ನೀಡಿದ್ದಾರೆ.
ಬಯೊಂಡ ಡಿನು ಸಚಿನ್, ಚಕ್ಕೆರ ಪಂಚಮ್ ಬೋಪಣ್ಣ ಹಾಡುಗಳನ್ನು ಹಾಡಿದ್ದು, ಸಂಶೋಧನೆ, ಕೊಡವ ಕ್ಲನ್ ಗುಮ್ಮಟ್ಟೀರ ಕಿಶು ಉತ್ತಪ್ಪ, ಸಹ ಸಂಭಾಷಣೆ ಆಪಾಡಂಡ ಜಗ ಮೊಣ್ಣಪ್ಪ, ಉಳುವಂಗಡ ಕಾವೇರಿ ಉದಯ, ಬಾಚರಣಿಯಂಡ ಅಪ್ಪಣ್ಣ, ರಾಣು ಅಪ್ಪಣ್ಣ, ತಾಂತ್ರಿಕ ವಿಭಾಗದಲ್ಲಿ ಚೋಕಂಡ ದಿನು ನಂಜಪ್ಪ, ಈರಮಂಡ ಹರಿಣಿ ವಿಜಯ್, ನಾಗರಾಜ್ ನೀಲ್, ಅಪೂರ್ವ, ಶರತ್, ಮೇಘರಾಜ್, ಪುಟ್ಟ ಪಾಂಡವಪುರ, ಪ್ರದೀಪ್ ಆರ್ಯನ್, ನಿರಂಜನ್ ಹಾಗೂ ಸಹ ನಿರ್ದೇಶಕರಾಗಿ ಇತಿಹಾಸ ಶಂಕರ್ ಕಾರ್ಯನಿರ್ವಹಿಸಿದ್ದಾರೆ.
::: ಕಲಾವಿದರು :::
ಚಿತ್ರದಲ್ಲಿ ನಾಯಕನಾಗಿ ಕೇಲೆಟಿರ ಪವಿತ್, ನಾಯಕಿಯಾಗಿ ತೀತಿರ ತನುಜ (ಸೌಮ್ಯ), ಇತರ ಪಾತ್ರವರ್ಗದಲ್ಲಿ ಬೊಳ್ಳಜಿರ ಬಿ.ಅಯ್ಯಪ್ಪ, ವಾಂಚೀರ ವಿಠಲ್ ನಾಣಯ್ಯ, ಮಂಡೀರ ಪದ್ಮ ಬೋಪಯ್ಯ, ಅಲ್ಲಾರಂಡ ವಿಠಲ್ ನಂಜಪ್ಪ, ಈರಮಂಡ ವಿಜಯ್ ಉತ್ತಯ್ಯ, ಈರಮಂಡ ಹರಿಣಿ ವಿಜಯ್, ಬಾಚರಣಿಯಂಡ ಅಪ್ಪಣ್ಣ, ರಾಣು ಅಪ್ಪಣ್ಣ, ಪುಲಿಯಂಡ ಯಾಮಿನಿ ಪೊನ್ನಪ್ಪ, ಕಾಣತಂಡ ನೇಹಾ, ಅಮ್ಮಾಟಂಡ ವಿಂಧ್ಯಾ ದೇವಯ್ಯ, ಮೇಜರ್ ಡಾ.ಕುಶ್ವಂತ್ ಕೋಳಿಬೈಲ್, ಕೋಳುಮಾಡಂಡ ತಾವರೆ ಉತ್ತಪ್ಪ, ಕೋಳುಮಾಡಂಡ ಸಾಬು ಉತ್ತಪ್ಪ, ಬುಟ್ಟಂಡ ಕಸ್ಮಾಅಯ್ಯಣ್ಣ, ಮೊಣ್ಣಂಡ ನೇಹಾ ಮೋಟಯ್ಯ, ಪುತ್ತರಿರ ಕರುಣ್ ಕಾಳಯ್ಯ, ಅಜ್ಜಮಕ್ಕಡ ವಿನು ಕುಶಾಲಪ್ಪ, ಮಂದೆಯAಡ ರಜಿ ಬೆಳ್ಯಪ್ಪ, ಅಮ್ಮಾಟಂಡ ದೇವಯ್ಯ, ಏಳ್ತ್ಂಡ ಮಮತ ಬೋಪಣ್ಣ, ಬೊಳ್ಳಜಿರ ಯಮುನಾ ಅಯ್ಯಪ್ಪ, ಚೊಟ್ಟಂಡ ನಿರ್ಷಿತ ದೇಚಮ್ಮ ಪಡಿಯೆ ಟ್ಟಿರ ಭರತ್ ಬಿದ್ದಪ್ಪ ಬೀಕಚಂಡ ಬೆಳ್ಯಪ್ಪ (ಪುಟ್ಟ) ಹಾಗೂ ತಂಡ, ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ತಂಡ, ಬಾಲ ಕಲಾವಿದರಾಗಿ ಬೊಳ್ಳಜಿರ ದೇಚಮ್ಮ ಅಯ್ಯಪ್ಪ, ಬೊಳ್ಳಜಿರ ಬೋಪಣ್ಣ ಅಯ್ಯಪ್ಪ, ಅಮ್ಮಾಟಂಡ ಕೆನ್ ಕಾವೇರಪ್ಪ, ಅಮ್ಮಾಟಂಡ ದಕ್ಷ್ ಸೋಮಯ್ಯ, ಅಮ್ಮಾಟಂಡ ಪ್ರಾಪ್ತಿ ದೇವಯ್ಯ, ಆಂಗೀರ ನೀಲ್ ಮಾಚಯ್ಯ ಅಭಿನಯಿಸಿದ್ದಾರೆ.