ಸಿದ್ದಾಪುರ ಸೆ.25 : ಕರಡಿಗೋಡು ಶ್ರೀ ಗಣೇಶ ಮಿತ್ರ ಮಂಡಳಿ ವತಿಯಿಂದ 11ನೇ ವರ್ಷದ ಗೌರಿ ಗಣೇಶ ವಿಸರ್ಜನ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ದಾ ಭಕ್ತಿಯಿಂದ ನಡೆಯಿತು.
ಶ್ರೀ ಅಯ್ಯಪ್ಪ ಸೇವಾ ಸಮಿತಿ ಸಭಾಂಗಣದಲ್ಲಿ ಬೆಳ್ಳಿಗೆ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿತು.
ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ವಿದ್ಯುತ್ ಅಲಂಕೃತ ಮಂಟಪದಲ್ಲಿ ಗ್ರಾಮದಲ್ಲಿ ಶೋಭಾಯಾತ್ರೆ ನಡೆಸಿ ಕೊಡಗಿನ ಪುಣ್ಯ ಕಾವೇರಿನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಈ ಸಂದರ್ಭ ಶ್ರೀ ಗಣೇಶ ಮಿತ್ರ ಮಂಡಳಿ ಅಧ್ಯಕ್ಷ ಎಂ.ಆರ್. ಶಾಜನ್ ಮಾತನಾಡಿ, ಪ್ರಾಕೃತಿಕ ವಿಕೋಪ, ಕೋವಿಡ್ ಸಂಕಷ್ಟದಿಂದ ಕಳೆದ ಕೆಲವು ವರ್ಷ ಸಾಂಕೇತಿಕವಾಗಿ ಸರಳವಾಗಿ ಆಚರಿಸಲಾಯಿತು. ಈ ಬಾರಿ ಗ್ರಾಮಸ್ಥರ ಸಹಕಾರದಿಂದ ನಾಲ್ಕುದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮದೊಂದಿಗೆ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ ಎಂದರು.
ಶೋಭಾಯಾತ್ರೆಯ ಮೂಲಕ ಗ್ರಾಮದಲ್ಲಿ ಮೆರವಣಿ ನಡೆಸಲಾಯಿತು. ಯುವಕ ಯುವತಿಯರು ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು.
ವರದಿ : ಎಂ.ಎ.ಕೃಷ್ಣ (ಸಿದ್ದಾಪುರ)









