ನಾಪೋಕ್ಲು ಸೆ.25 : ಸದಸ್ಯರು ದವಸ ಭಂಡಾರದ ವ್ಯವಹಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಮೂಲಕ ದವಸ ಭಂಡಾರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಸಂಘದ ಅಧ್ಯಕ್ಷ ಕಂಗಾಂಡ ಜಾಲಿ ಪೂವಪ್ಪ ಮನವಿ ಮಾಡಿದರು.
ದವಸ ಭಂಡಾರದ ಕಟ್ಟಡದಲ್ಲಿ ಆಯೋಜಿಸಲಾದ ನಂ. 90ನೇ ನಾಪೋಕ್ಲು ಧವಸ ಭಂಡಾರದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಸಂದರ್ಭ ಸಭೆಯಲ್ಲಿ ದವಸ ಭಂಡಾರದ ಅಭಿವೃದ್ಧಿಗೆ ಸುದೀರ್ಘವಾಗಿ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರಲಾಯಿತು. ಚರ್ಚೆಯಲ್ಲಿ ಅರೆಯಡ ಅಶೋಕ್, ಕೊಂಬಂಡ ಗಣೇಶ್, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಸಿ.ಎಸ್.ಜೋಯಪ್ಪ, ಬಿ.ಸಿ.ಕಾವೇರಪ್ಪ, ಕುಲ್ಲೇಟಿರ ದೇವಯ್ಯ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಶಿವಚಾಳಿಯಂಡ ಬೋಪಣ್ಣ, ನಿರ್ದೇಶಕರಾದ ಶಿವಚಾಳಿಯಂಡ ಸೋಮಯ್ಯ,ಕುಲ್ಲೇಟ್ಟೀರ ತಮ್ಮಯ್ಯ,ಅರೆಯಡ ವಿನೋದ್,ಬೊಪ್ಪಂಡ ಕಾಳಪ್ಪ,ಪಾಡಿಯಮ್ಮಂಡ ಮಹೇಶ್, ಅಮ್ಮಂಡ ಅಶೋಕ್, ಅಜ್ಜೇಟ್ಟೀರ ರಾಣಿ ಪಳಂಗಪ್ಪ, ಶಿವಚಾಳಿಯಂಡ ಸುಬ್ಬಮ್ಮ,
ಹೆಚ್.ಎ.ಬೊಳ್ಳು ಸುಬ್ಬಮ್ಮ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.








