ಮಡಿಕೇರಿ ಸೆ.25 : ಚೆಟ್ಟಳ್ಳಿಯ ಹಿಂದೂ ಮಲಯಾಳಿ ಸಮಾಜಂ ವತಿಯಿಂದ 15 ನೇ ವರ್ಷದ ಓಣಂ ಆಚರಣೆ ಸಂಭ್ರಮದಿಂದ ನಡೆಯಿತು.
ಚೆಟ್ಟಳ್ಳಿಯ ಮಂಗಳ ಸಂಭಾಂಗಣದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಮಹಿಳೆಯರು ರಚಿಸಿದ ಪೂಕಳಂ (ಹೂವಿನ ರಂಗೋಲಿ), ಚಂಡೆಮೇಳ, ವiಹಾಬಲಿ ಚಕ್ರವರ್ತಿಯ ವೇಷಭೂಷಣ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಮಲಯಾಳಿ ಸಮಾಜಂ ನಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಎಲ್ಲರ ಸಹಕಾರದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಮಲಯಾಳಿ ಸಮಾಜದ ಅಭ್ಯುದಯಕ್ಕೆ ಸಹಕಾರ ನೀಡುತ್ತೇನೆ ಎಂದರು.
ಮಲಯಾಳಿ ಸಮಾಜಂ ನ ಅಧ್ಯಕ್ಷ ಕೆ.ಕೆ.ಸುರೇಶ್ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಗೌರವಾಧ್ಯಕ್ಷ ಎಸ್.ಕುಟ್ಟನ್ ಉದ್ಘಾಟಿಸಿದರು.
ಸಮಾಜದ ಉಪಾಧ್ಯಕ್ಷ ಪಿ.ಕೆ.ವಿನಿಶ್, ಸದಸ್ಯೆ ಸುಲೋಚನಾ ನಾರಾಯಣ, ಚೆಟ್ಟಳ್ಳಿ ಗ್ರಾ.ಪಂ ಅಧ್ಯಕ್ಷರಾದ ಸಿಂಧು ರಾಜನ್, ಸಮಾಜದ ಮಾಜಿ ಅಧ್ಯಕ್ಷರುಗಳಾದ ವಿ.ಕೆ.ವಿನು, ಎನ್.ಚಂದ್ರನ್, ಒ.ಕೆ.ಶ್ರೀನಿವಾಸ್, ಎಸ್.ಎಲ್.ಎನ್ ಪ್ಲಾಂಟೇಶನ್ ನ ವ್ಯವಸ್ಥಾಪಕ ಪಿ.ಕಣ್ಣನ್, ಪ್ರಧಾನ ಕಾರ್ಯದರ್ಶಿ ಉಷಾಕುಮಾರಿ, ಖಜಾಂಚಿ ಕೆ.ಬಿ.ವಿಜಯನ್, ಪ್ರಮುಖರಾದ ಪ್ರವೀಣ್ ಕುಮಾರ್, ಎನ್.ಕೆ.ರಾಜನ್, ಮನೋಜ್, ಧನಲಕ್ಷ್ಮಿ, ಸಮಾಜದ ಪದಾಧಿಕಾರಿಗಳು, ಸದಸ್ಯರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
ಶಾಸಕ ಡಾ.ಮಂತರ್ ಗೌಡ, ಗ್ಲೋಬಲ್ ಸ್ಟಾರ್ ಪ್ರಶಸ್ತಿ ಪಡೆದ ತನುಕ್ಷ ಕೆ.ಆರ್, ಆರ್ಯ ಪಿ.ಎಸ್ ಹಾಗೂ ಗ್ರಾ.ಪಂ ಅಧ್ಯಕ್ಷರಾದ ಸಿಂಧು ರಾಜನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 10ನೇ ತರಗತಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಚೆಟ್ಟಳ್ಳಿ ಪಟ್ಟಣದಲ್ಲಿ ಮಲೆಯಾಳಿ ಬಂಧುಗಳಿಂದ ಚಂಡೆಮೇಳದೊಂದಿಗೆ ಆಕರ್ಷಕ ಮೆರವಣಿಗೆ ಮತ್ತು ವಿವಿಧ ಕ್ರೀಡಾಸ್ಪರ್ಧೆ ನಡೆಯಿತು. ಓಣಂ ಕಾರ್ಯಕ್ರಮದ ಪ್ರಯುಕ್ತ ಓಣಂ ಸದ್ಯ (ಓಣಂ ವಿಶೇಷ ಭೋಜನ) ದ ವ್ಯವಸ್ಥೆ ಮಾಡಲಾಗಿತ್ತು. (ವರದಿ : ಕರುಣ್ ಕಾಳಯ್ಯ)











