ಮಡಿಕೇರಿ ಸೆ.25 : ಕರ್ಣಂಗೇರಿ ಗ್ರಾಮದ ಮೊಣಕಾಲ್ಮುರಿ ಶಾಲೆಯ ವಿದ್ಯಾರ್ಥಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಸಮವಸ್ತ್ರ ಮತ್ತು ಶೂ ವಿತರಿಸಿದರು.
ನಂತರ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿಯ ಪುಟಾಣಿಗಳಿಗೆ ಸಿಹಿ ಹಂಚಿ ಮಕ್ಕಳೊಂದಿಗೆ ಮಕ್ಕಳಾದರು.
ಈ ಸಂದರ್ಭ ಕೆ.ನಿಡುಗಣೆ ಗ್ರಾ.ಪಂ ಸದಸ್ಯರಾದ ಜಾನ್ಸನ್ ಪಿಂಟೋ, ಅನಿತಾ ಸ್ಥಳೀಯರಾದ ಪ್ರೇಮ್ ಕುಮಾರ್, ಕೃಷ್ಣಪ್ಪ, ಶಾಲೆಯ ಮುಖ್ಯ ಶಿಕ್ಷಕಿ ಶಾಲಿನಿ, ಅಂಗನಾವಡಿ ಸಹಾಯಕಿ ಜಯಂತಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.










