ಮಡಿಕೇರಿ ಸೆ.25 : ಶಾಂತಿನಿಕೇತನ ಯುವಕ ಸಂಘದ ವತಿಯಿಂದ ನಡೆಯುತ್ತಿರುವ 45ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.
ಅಶ್ವಿನಿ ಗಣಪತಿ ದೇವಸ್ಥಾನದಿಂದ ಕ್ರೀಡಾ ಜ್ಯೋತಿಯೊಂದಿಗೆ ಆಗಮಿಸಿದ ಸಂಘದ ಸದಸ್ಯ ಹಾಗೂ ಮಾಜಿ ಕ್ರೀಡಾಪಟು ಪಿ.ಎ.ರವಿ ಪಂದ್ಯಾವಳಿಗೆ ಚಾಲನೆ ನೀಡಿದರು.
ಶಾಂತಿನಿಕೇತನದಲ್ಲಿ ನಡೆದ ಕ್ರೀಡಾಕೂಟದ ಕಾರ್ಯಕ್ರಮವನ್ನು ವ್ಯಾಂಡಮ್ ಎಂಟರ್ ಪ್ರೈಸಸ್ ನ ಮಾಲೀಕ ಕೆ.ಕೆ.ದಾಮೋದರ ಉದ್ಘಾಟಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಚಿತ್ತಾರ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕಿ ಸವಿತಾ ರೈ, ಶಾಂತಿನಿಕೇತನ ಯುವಕ ಸಂಘ ಅಂದು ಬಾಲ ಗಂಗಾಧರನಾಥ ತಿಲಕರ ಗಣೇಶೋತ್ಸವದ ಉದ್ದೇಶವನ್ನು ಇಂದಿಗೂ ಯಥಾವತ್ತಾಗಿ ಪಾಲಿಸಿಕೊಂಡು ಶ್ರದ್ಧಾಭಕ್ತಿಯಿಂದ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯವೆಂದರು.
ಮಡಿಕೇರಿ ದಸರಾದ 11ನೇ ಮಂಟಪ ಶಾಂತಿನಿಕೇತನ ಯುವಕ ಸಂಘದ ಗಣೇಶೋತ್ಸವ ಮಂಟಪ ಎನ್ನುವ ಹೆಗ್ಗಳಿಕೆ ಇದೆ. ಸಂಘದ ಅಧ್ಯಕ್ಷ ಚೇತನ್ ಹಾಗೂ ತಂಡದ ಶ್ರಮ ಇತರರಿಗೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಗೌರವ ಸಲಹೆಗಾರ ಮನು ಮಂಜುನಾಥ್ ಮಾತನಾಡಿ, ಕ್ರೀಡೆಗಳು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಮೊಬೈಲ್‍ನಿಂದ ದೂರ ಉಳಿದು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ನವರತ್ನ ಬೇಕರಿ ಮಾಲೀಕ ರಾಜು, ಕ್ರೀಡಾ ಸಮಿತಿಯ ಆಕಾಶ್ ತೇಜು ಹಾಗೂ ತಮ್ಮಿ ಉಪಸ್ಥಿತರಿದ್ದರು. ಯೋಗೇಶ್ ಕುಮಾರ್ ಸ್ವಾಗತಿಸಿ, ದಿವಾಕರ ರೈ ವಂದಿಸಿ, ಭರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
::: ಕ್ರೀಡಾಕೂಟದ ವಿಜೇತರು :::
ಎಲ್.ಕೆ.ಜಿ. ಮತ್ತು ಯುಕೆಜಿ ಮಕ್ಕಳಿಗೆ ನಡೆದ ಕಾಳುಹೆಕ್ಕುವ ಸ್ಪರ್ಧೆಯಲ್ಲಿ ಎಸ್.ಪಿ.ಮೋನಿಶ್ ಪ್ರಥಮ, ಶೌರ್ಯ ದ್ವಿತೀಯ, ಎಸ್.ರುಚಿತಾ ತೃತೀಯ, 1 ರಿಂದ 3ನೇ ತರಗತಿ ಮಕ್ಕಳಿಗೆ ನಡೆದ ಬಣ್ಣ ಹಚ್ಚುವ ಸ್ಪರ್ಧೆಯಲ್ಲಿ ಹೆಚ್.ಸಿ.ಪುನರ್ವಿ ಗೌಡ ಪ್ರಥಮ, ಚಿರಂತ್ ಎನ್.ಗೌಡ ದ್ವಿತೀಯ, ಅನ್ಯ ಎಂಜಿಲಿನ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
4 ರಿಂದ 6ನೇ ತರಗತಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಕೆ.ಎಸ್.ರಿಶಿತ್ ಪ್ರಥಮ, ಕೆ.ಸಿ.ಮೇಘನಾ ದ್ವಿತೀಯ, ಕೆ.ವಿ.ಪಂಚಮಿ ತೃತೀಯ ಬಹುಮಾನ.
7 ರಿಂದ 10ನೇ ತರಗತಿ ಬಾಲಕರ 200 ಮೀ ಓಟದ ಸ್ಪರ್ಧೆಯಲ್ಲಿ ಸಮರ್ಥ್ ಚಂಗಪ್ಪ ಪ್ರಥಮ, ಟಿ.ಹೆಚ್.ರೋಹನ್ ದ್ವಿತೀಯ, ತೃತೀಯ ಬಹುಮಾನವನ್ನು ಹೆಚ್.ಕೆ.ದಿಗಂತ್ ಗೆದ್ದುಕೊಂಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಅರ್ಚ ಉಣ್ಣಿಕೃಷ್ಣ ಪ್ರಥಮ, ಲಕ್ಷತಾ ದ್ವಿತೀಯ, ಟಿ.ವಿ.ಮೌಲ್ಯ ತೃತೀಯ ಬಹುಮಾನವನ್ನು ಗೆದ್ದುಕೊಂಡಿದ್ದಾರೆ.
ಸಾರ್ವಜನಿಕರ ಮೆರಥಾನ್ ಸ್ಪರ್ಧೆಯಲ್ಲಿ ರಿಶಿ ಪೊನ್ನಪ್ಪ ಪ್ರಥಮ, ಎ.ವಿ.ಸುದೀಪ್ ದ್ವಿತೀಯ, ಕೆ.ಇ.ಮುತ್ತಪ್ಪ ತೃತೀಯ.
ಭಾರದ ಗುಂಡು ಎಸೆತ ಮಹಿಳೆಯರ ವಿಭಾಗದಲ್ಲಿ ಶೃತಿ ಪ್ರದೀಪ್ ಪ್ರಥಮ, ಟಿ.ಸವಿತಾ ದ್ವಿತೀಯ, ವೀಣಾ ಜಯಪ್ರಕಾಶ್ ತೃತೀಯ. ಪುರುಷರ ವಿಭಾಗದಲ್ಲಿ ಮಿಲನ್ ಮುತ್ತಣ್ಣ ಪ್ರಥಮ, ಭರತ್ ದ್ವಿತೀಯ, ತೀರ್ಥ ಕುಮಾರ್ ತೃತೀಯ ಬಹಮಮಾನವನ್ನು ಪಡೆದುಕೊಂಡಿದ್ದಾರೆ.
ಬಾಂಬ್ ಇನ್ ದಿ ಸಿಟಿ ಮಹಿಳೆಯರ ವಿಭಾಗದಲ್ಲಿ ಎಂ.ಎಸ್.ನೀಲಮ್ಮ ಪ್ರಥಮ, ವಿ.ಎನ್.ಚಂದ್ರಮ್ಮ ದ್ವಿತೀಯ, ಪುರುಷರ ವಿಭಾಗದಲ್ಲಿ ಎಸ್.ಟಿ.ಬಸವರಾಜು ಪ್ರಥಮ, ಸಂಗಮೇಶ್ ದ್ವಿತೀಯ, ಪಿ.ಎಸ್.ಪ್ರಸಾದ್ ತೃತೀಯ.
ಮಹಿಳೆಯರ ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಟೀನಾ ಪ್ರಥಮ, ಎಸ್.ಆರ್.ರಾಣಿ ದ್ವಿತೀಯ ಹಾಗೂ ಧನ್ಯ ಮಧು ತೃತೀಯ, ಬಕೆಟ್‍ಗೆ ಬಾಲ್ ಹಾಕುವ ಸ್ಪರ್ಧೆಯಲ್ಲಿ ಎಸ್.ಆರ್.ರಾಣಿ ಪ್ರಥಮ, ಟೀನಾ ದ್ವಿತೀಯ, ವಾಣಿ ತೃತಿಯ ಬಹುಮಾನ ಗೆದ್ದುಕೊಂಡಿದ್ದಾರೆ.
ಪುರುಷರ ರಿಂಗ-ರಿಂಗ ಸ್ಪರ್ಧೆಯಲ್ಲಿ ಚೇತನ್ ಕುಮಾರ್ ಪ್ರಥಮ, ಬಿ.ಎಸ್.ಸುಹಾನ್ ದ್ವಿತೀಯ, ಕುಶಾಲ್ ತೃತೀಯ, ಗೋಣಿ ಚೀಲದ ಓಟದ ಸ್ಪರ್ಧೆಯಲ್ಲಿ ಪಿ.ಎಸ್.ಪ್ರಸಾದ್ ಪ್ರಥಮ, ಟಿ.ಆರ್.ಪಾಪಣ್ಣ ದ್ವಿತೀಯ, ಬಿ.ವೈ.ಯೇಣುಕುಮಾರ್, ಬೆಲೂನ್ ನಡಿಗೆ ಸ್ಪರ್ಧೆಯಲ್ಲಿ ಚೇತನ್ ಕುಮಾರ್ ಪ್ರಥಮ, ಗಣೇಶ್ ದ್ವಿತೀಯ, ಜಗದೀಶ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಕೋಳಿ ಜಗಳ ಸ್ಪರ್ಧೆಯಲ್ಲಿ ಶಫೀನ್ ತಾಜ್ ಪ್ರಥಮ, ಲಕ್ಷಿತಾ ದ್ವಿತೀಯ, ಪ್ರಮೀಳ ತೃತೀಯ ಬಹುಮಾನ.
ಬೆಲೂನ್ ನಿಂದ ಕಪ್ ತೆಗೆಯುವ ಸ್ಪರ್ಧೆಯಲ್ಲಿ ರೇಖಾ ಪ್ರಥಮ, ಅಶ್ವಿನಿ ದ್ವಿತೀಯ, ಗಾನವಿ ತೃತೀಯ, ಚಮಚದಿಂದ ನಾಣ್ಯ ತೆಗೆಯುವ ಸ್ಪರ್ಧೆಯಲ್ಲಿ ರೇಖಾ ರವಿಕುಮಾರ್ ಪ್ರಥಮ, ಅಶ್ವೀನಿ ದ್ವಿತೀಯ, ರೇಖಾ ಯೋಗೇಶ್ ತೃತೀಯ ಬಹುಮಾನ, ಪೇಪರ್ ಗ್ಲಾಸ್ ಪಿರಮಿಡ್ ಸ್ಪರ್ಧೆಯಲ್ಲಿ ಧನ್ಯಮಧು ಪ್ರಥಮ, ಹೆಚ್.ವಿದ್ಯಾ ದ್ವಿತೀಯ, ಅಶ್ವಿನಿ ತೃತೀಯ ಬಹುಮಾನ ಪಡೆದುಕೊಂಡರು.
ಸಂಘದ ಸದಸ್ಯರಿಗೆ ನಡೆದ ಬೆಲೂನ್ ರಕ್ಷಣೆ ಸ್ಪರ್ಧೆಯಲ್ಲಿ ಜಗದೀಶ್ ಪ್ರಥಮ, ಭರತ್ ದ್ವಿತೀಯ, ವಿನು ತೃತೀಯ ಬಹುಮಾನ ಪಡೆದುಕೊಂಡರು.











