ಮಡಿಕೇರಿ ಸೆ.25 : ಕಕ್ಕಬ್ಬೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನಾಲಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
1 ರಿಂದ 4ನೇ ತರಗತಿ ವಿಭಾಗದ ಛದ್ಮವೇಶ ಸ್ಪರ್ಧೆಯಲ್ಲಿ ಆಕಾಶ್ ಉತ್ತಪ್ಪ ಪ್ರಥಮ, ಧಾರ್ಮಿಕ ಪಠಣದಲ್ಲಿ ಆರ್.ಸಿರಿ ಪ್ರಥಮ, ಭಕ್ತಿಗೀತೆಯಲ್ಲಿ ನಂದಿನಿ ಪ್ರಥಮ, ಲಘು ಸಂಗೀತದಲ್ಲಿ ಆರ್.ಸಿರಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಚಿತ್ರಕಲೆ ಸ್ಪರ್ಧೆಯಲ್ಲಿ ಸಜನ್ ದ್ವಿತೀಯ, ಅಭಿನಯ ಗೀತೆಯಲ್ಲಿ ನಂದಿನಿ ದ್ವಿತೀಯ, ಮಣ್ಣಿನ ಮಾದರಿಯಲ್ಲಿ ದರ್ಶನ್ ದ್ವಿತೀಯ ಸ್ಥಾನ ಗೆದ್ದುಕೊಂಡಿದ್ದಾರೆ.
5 ರಿಂದ 7ನೇ ತರಗತಿ ವಿಭಾಗದ ಧಾರ್ಮಿಕ ಪಠಣದಲ್ಲಿ ಕೆ.ಜಿ.ಕವನ ಪ್ರಥಮ, ಛದ್ಮವೇಶದಲ್ಲಿ ಅಮೂಲ್ಯ ದ್ವಿತೀಯ, ಮಿಮಿಕ್ರಿಯಲ್ಲಿ ರಾಜೇಶ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಕೇವಲ 13 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಅಮೋಘ ಸಾಧನೆ ಮಾಡಿದ್ದಾರೆ.
ಅತಿಥಿ ಶಿಕ್ಷಕರಾದ ಗೌರಮ್ಮ ಮತ್ತು ಸಾರಿಕ ಪಾಠ ಪ್ರವಚನದ ಜೊತೆಗೆ ಪಠ್ಯೇತರ ಚಟುವಟಿಕೆ ಮೇಲಿರುವ ಆಸಕ್ತಿಯನ್ನು ತೋರಿಸುವಲ್ಲಿ ಸಹಕರಿಸಿದ್ದಾರೆ.









