ಸುಂಟಿಕೊಪ್ಪ,ಸೆ.25 : ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ರಾಮಮಂದಿರದಲ್ಲಿ ನಡೆಯುತ್ತಿರುವ 59ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಮಹಿಳೆಯರು ಮತ್ತು ಯುವತಿಯರಿಗೆ ರಂಗೋಲಿ, ಮಡಿಕೆ ಒಡೆಯುವ ಸ್ಪರ್ಧೆ ನಡೆಯಿತು.
ಸುಂಟಿಕೊಪ್ಪದ ಮಂಜನಾಥಯ್ಯ ಮೀನಾಕ್ಷಮ ಕಲ್ಯಾಣ ಮಂಟಪದಲ್ಲಿ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಮಹಿಳೆಯರು ಮತ್ತು ಯುವತಿಯರಿಗೆ ರಂಗೋಲಿ, ಮ್ಯೂಸಿಕಲ್‍ಚೇರ್, ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಮಹಿಳೆಯರು ಯುವತಿಯರು ಉತ್ಸಾಹದಿಂದ ಭಾಗವಹಿಸಿದರು.
ರಂಗೋಲಿ ಸ್ಪರ್ಧೆಯಲ್ಲಿ ರಶ್ಮಿ ಪ್ರಥಮ, ಕೆ.ಪಿ.ಭವ್ಯ ದ್ವಿತೀಯ, ದಿವ್ಯ ಸುನಿಲ್, ರಂಜನಿ ತೃತೀಯ ಸ್ಥಾನವನ್ನು ಪಡೆದುಕೊಂಡರು.
ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ರಮ್ಯ ಪ್ರಥಮ, ಕಾವೇರಿ ದಿನು ದ್ವಿತೀಯ, ತೃತೀಯ ಸ್ಥಾನವನ್ನು ಮೇಘನ ಸುನಿಲ್ ಪಡೆದುಕೊಂಡರು.
ಮೂಸಿಕಲ್ ಚೇರ್ ಕಾಲೇಜು ಯುವತಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ವರ್ಷ, ದ್ವಿತೀಯ ಸ್ಥಾನವನ್ನು ಸುನೀತ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮೀರಾ, ದ್ವಿತೀಯ ಸ್ಥಾನವನ್ನು ಶೀಲಾ ಪಡೆದುಕೊಂಡರು.
ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾಧಿಗಳಿಗೆ ಕ್ರೀಡೆ ಹಾಗೂ ವಿವಿಧ ಬಣ್ಣಗಳಿಂದ ರೂಪುಗೊಂಡಿದ್ದ ರಂಗೋಲಿಯು ಮೆಚ್ಚುಗೆಗೆ ಪಾತ್ರವಾಯಿತು.








