ಸುಂಟಿಕೊಪ್ಪ ಸೆ.26 : ಮಾದಾಪುರ ವಿವಿದೋದ್ಧೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷರಾಗಿ ನಾಪಂಡ ಉಮೇಶ್ ಉತ್ತಪ್ಪ ಹಾಗೂ ಉಪಾಧ್ಯಕ್ಷರಾಗಿ ಪವಿತ್ರ ಹರೀಶ್ ಆಯ್ಕೆಯಾಗಿದ್ದಾರೆ.
ಈ ಸಂಘದಲ್ಲಿ ಬಿಜೆಪಿ ಬೆಂಬಲಿತ 11 ಸದಸ್ಯರುಗಳು ಚುನಾಯಿತರಾಗಿದ್ದು, ಇಬ್ಬರು ಪಕ್ಷೇತರರು ನಿರ್ದೇಶಕರಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಬಿಜ್ಜಂಡ ಮೊಣ್ಣಪ್ಪ ಸುಬ್ರಮಣಿ ಹಾಗೂ ನಾಪಂಡ ಉಮೇಶ ಉತ್ತಪ್ಪ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಪವಿತ್ರ ಹರೀಶ್ ಒಬ್ಬರೇ ನಾಮಪತ್ರ ಸಲ್ಲಿಸಿದರು.
ಮಡಿಕೇರಿ ಸಹಕಾರಿ ಇಲಾಖೆಯ ಉಪ ನಿಬಂಧಕರ ಕಚೇರಿ ಅಧಿಕಾರಿ ಬಿ.ಜೆ.ಸಂದೀಪ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಅಧ್ಯಕ್ಷ ಸ್ಥಾನದ ಮತ ಎಣಿಕೆಗೊಂಡಾಗ ನಾಪಂಡ ಉಮೇಶ್ ಉತ್ತಪ್ಪ ಅವರಿಗೆ 8 ಮತ ಹಾಗೂ ಬಿಜ್ಜಂಡ ಸುಬ್ರಮಣಿ ಅವರಿಗೆ 4 ಮತಗಳು ಲಭಿಸಿತು. ಚುನಾವಣಾಧಿಕಾರಿ ಸಹಾಯಕರಾಗಿ ಸಂಘದ ಸಿಇಓ ಬಿ.ಎಸ್.ಕಾವೇರಪ್ಪ ಕಾರ್ಯನಿರ್ವಹಿಸಿದರು.
ಉಪಾಧ್ಯಕ್ಷರಾಗಿ ಪವಿತ್ರ ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆಯಲ್ಲಿ ನಿರ್ದೇಶಕರಾದ ಬಿಜ್ಜಂಡ ಮೊಣ್ಣಪ್ಪ, ತಿಲಕ್ ಕುಮಾರ್, ನಾಗಂಡ ಭವಿನ್, ಸೋನು ದೇಚಮ್ಮ, ಪವಿತ್ರ ಹರೀಶ್, ಕುಟ್ಟಂಡ ಕುಟ್ಟಪ್ಪ, ಮುಕ್ಕಾಟಿರ ತಮ್ಮಯ್ಯ, ಸಿ.ಎ.ತಮ್ಮಯ್ಯ, ಕೆ.ಎ.ಲತೀಫ್, ಗಿರೀಶ್, ನಾಪಂಡ ಉಮೇಶ್ ಉತ್ತಪ್ಪ, ಹೆಚ್.ಇ.ಭೀಮಯ್ಯ ಮತಚಲಾಯಿಸಿದರು.









